ರಾಯಚೂರು ಜಿಲ್ಲೆ ಸುದ್ದಿ

ಹಲವೆಡೆ ಬಸ್ ಗಾಗಿ ಮುಗಿ ಬಿದ್ದ ಜನರು , ರಾಯಚೂರಿನಲ್ಲಿ ಮಾತ್ರ ಬಸ್ ಖಾಲಿ ಖಾಲಿ

ವರದಿ : ಸಿರಾಜುದ್ದೀನ್ ಬಂಗಾರ್

ರಾಯಚೂರು(ಮೇ. 19): ಇಂದಿನಿಂದ ರಾಜ್ಯಾದ್ಯಂತ ಬಸ್ ಸಂಚಾರ ಆರಂಭವಾಗಿದೆ. ರಾಯಚೂರು ಈ ಮೊದಲು ಗ್ರೀನ್ ಝೋನ್ ನಲ್ಲಿತ್ತು. ಈಗ 6 ಪಾಸಿಟಿವ್ ಕೇಸ್ ಗಳು ವರದಿಯಾದ ನಂತರ ಆರೆಂಜ್ ಝೋನಿನಲ್ಲಿದೆ. ಮೇ 4 ರಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ ಬಸ್ ಸಂಚಾರ ಆರಂಭವಾಗಿತ್ತು. ಇಂದು ರಾಜ್ಯದಾದ್ಯಂತ ಬಸ್​ಗಳು ಓಡುತ್ತಿವೆ. ಇಂದು‌ ಆರಂಭಿಕವಾಗಿ 100 ಬಸ್ ಗಳನ್ನು 8 ಘಟಕಗಳಿಂದ ಬಿಡಲಾಗಿದೆ. ಆದರೆ, ನಿರೀಕ್ಷಿತ ಪ್ರಯಾಣಿಕರಿಲ್ಲದೆ ಬಸ್ ಓಡಾಟ ನಿಗಿದಿತ ಸಮಯಕ್ಕೆ ಹೋಗುತ್ತಿಲ್ಲ.

ಮುಂಜಾನೆ 7 ಗಂಟೆಗೆ ರಾಯಚೂರು ಬಸ್ ನಿಲ್ದಾಣಕ್ಕೆ ಬಳ್ಳಾರಿಗೆ ಹೋಗುವ ಬಸ್ ನಿಲ್ಲಿಸಲಾಗಿತ್ತು, ಈ ಬಸ್ ನಲ್ಲಿ ನಿಗಿದಿತ 30 ಪ್ರಯಾಣಿಕರು ಹೋಗಬೇಕು. ಆದರೆ 7.45 ಆದರೂ ನಿಗಿದಿತ ಪ್ರಯಾಣಿಕರು ಬರಲಿಲ್ಲ. ಇದಕ್ಕೆ ಮುಖ್ಯ ಕಾರಣ ರಾಯಚೂರು ಜನರಲ್ಲಿ ಕೊರೋನಾ ಭಯ. ಎರಡು ದಿನಗಳ ಹಿಂದೆ 6 ಕೇಸ್​ಗಳು ವರದಿಯಾದ ಹಿನ್ನೆಲೆ ರಾಯಚೂರು ನಗರ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಇಂದು ಜನರ ಸಂಖ್ಯೆ ಕಡಿಮೆ ಇದೆ. ಗ್ರಾಮೀಣ ಭಾಗದಿಂದ ಬಸ್ ಸೇವೆ ಸಂಪೂರ್ಣವಾಗಿ ಆರಂಭವಾಗದೆ ಇರುವುದು ಸಹ ಸಿಟಿಗಳಿಂದ ಹೊರಡುವ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ಬಸ್​ಗಳಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಅವರು ಸ್ಯಾನಿಟೈಸರ್ ಬಳಸಬೇಕು ಎಂದು ಸೂಚಿಸಲಾಗಿದೆ. ಮಾಸ್ಕ್ ಹಾಕಿಕೊಂಡು ಪ್ರಯಾಣಿಕರು ಬಂದಿದ್ದರು. ಆದರೆ, ಎಲ್ಲರಿಗೂ ಸ್ಯಾನಿಟೈಸರ್ ಹಾಕಿರಲಿಲ್ಲ. ಈ ಮಧ್ಯೆ ಗರ್ಭೀಣಿಯರು, 65 ವರ್ಷದವರು, 10 ವರ್ಷದೊಳಗಿನವರಿಗೆ ಬಸ್ ಪ್ರಯಾಣ ನಿರ್ಬಂಧಿಸಲಾಗಿದೆ. ಮಕ್ಕಳನ್ನು ಕರೆದುಕೊಂಡು ಬಂದವರನ್ನು ವೃದ್ದರನ್ನು ಕಂಡಕ್ಟರ್ ಬಸ್​ನಿಂದ ಇಳಿಸಿದ್ದಾರೆ.

ಬಸ್ ಸೇವೆ ಆರಂಭದ ಸಂದರ್ಭದಲ್ಲಿಯೇ 6 ಕೊರೊನಾ ಪ್ರಕರಣ ವರದಿಯಾಗಿದ್ದು ಸಹಜವಾಗಿ ರಾಯಚೂರು ಜಿಲ್ಲೆಯ ಜನರಲ್ಲಿ ಭಯ ಆವರಿಸಿದೆ. ಬಸ್​ನಲ್ಲಿ ಪ್ರಯಾಣಿಸುವವರ ಆರೋಗ್ಯದ ಬಗ್ಗೆ ಸಾಮಾನ್ಯವಾಗಿ ಆತಂಕವಿದೆ. ಈ‌ ಎಲ್ಲಾ ಕಾರಣಕ್ಕಾಗಿ ರಾಯಚೂರಿನಲ್ಲಿ ಆರಂಭದ ದಿನ‌ ಪ್ರಯಾಣಿಕರು ನಿರುತ್ಸಾಹ ತೋರಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close