ಕರ್ನಾಟಕ ಸುದ್ದಿ

‘ನರೇಗಾ ಯೋಜನೆಗೆ 40 ಸಾವಿರ ಕೋಟಿ ರೂ. ಮೀಸಲು; ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ದ‘ – ಕೆ.ಎಸ್​ ಈಶ್ವರಪ್ಪ

ವರದಿ : ಸಿರಾಜುದ್ದೀನ್ ಬಂಗಾರ್

ಚಿಕ್ಕಬಳ್ಳಾಪುರ(ಮೇ.19): “ಅಂತರ್ಜಲ ಮರು ಪೂರ್ಣ, ಬದು ನಿರ್ಮಾಣ ಮಾಸಾಚರಣೆ” ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್‌ ಸಚಿವ ಕೆ.ಎಸ್​ ಈಶ್ವರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ,ಕೆ.ಸುಧಾಕರ್ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಹಲವು ನರೇಗಾ ಯೋಜನೆ ನಡೆಯುತ್ತಿರುವ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ನರೇಗಾ ಯೋನೆಯಡಿ ಜಿಲ್ಲೆಯಲ್ಲಿ ಬುಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಹೀಗೆ ಪ್ರಸಕ್ತ ಸಾಲಿನ ಕೊರೋನಾ ಲಾಕ್​​ಡೌನ್​​​ನಲ್ಲಿ ಘೋಷಣೆಯಾಗಿದ್ದ ಕೆಲಸಗಳು ಕೂಡ ಶೇ.100ರಷ್ಟು ಪೂರ್ಣಗೊಂಡಿದ್ದಕ್ಕೆ ಸಂತಸಪಟ್ಟರು. ಬಳಿಕ ಹಾರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ನಡೆಯುತ್ತಿರುವ ಅಂತರ್ಜಲ ಮರು ಪೂರ್ಣ ಕಾಮಗಾರಿಗೂ ಚಿಕ್ಕಬಳ್ಳಾಪುರ ತಾಲ್ಲೂಕಿನ ಚದ್ಲಪುರ ಗ್ರಾಮದಲ್ಲಿ ಚಾಲನೆ ನೀಡಿದ ಸಚಿವರು, ಈ ಬಗ್ಗೆ ಮಾಹಿತಿ ಪಡೆದರು.

ಇನ್ನು, ಜಿಲಾ ಪಂಚಾಯತಿ ಸಿ.ಇ.ಓ ಫೌಝಿಯಾ ತರ್ನುಮ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ ಸಚಿವರು, ನರೇಗಾ ಸೇರಿದಂತೆ ಹತ್ತಾರು ಯೋಜನೆಗಳ ಅನುಷ್ಠಾನದ ಬಗ್ಗೆಯೂ ಚರ್ಚೆ ಮಾಡಿದರು. ಬಳಿಕ ಸುದ್ದಿಗಾರೊಂದಿಗೆ ಮಾತಾಡಿದ ಕೆ.ಎಸ್​​ ಈಶ್ವರಪ್ಪ, ಕೇಂದ್ರ ಸರ್ಕಾರ ಉದ್ಯೋಗ ಸೃಷ್ಠಿ, ಅಂತರ್ಜ ವೃದ್ದಿ ಸೇರಿದಂತೆ ನರೇಗಾ ಕಾಮಗಾರಿಗಳಿಗೆ 40 ಸಾವಿರ ಕೋಟಿ ಮೀಸಲು ಇಟ್ಟಿದೆ. 1200-1500 ಅಡಿ ತಲುಪಿರುವ ನೀರನ್ನ 500-600 ಅಂತರದಲ್ಲಿ ಸಿಗುವಂತೆ ಮಾಡುವುದು ಇದರ ಉದ್ದೇಶ ಎಂದರು.

ಇನ್ನು, ಮಳೆ ನೀರು ತಡೆ ಗೋಡೆ; ಹಿಂಗು ಗುಂಡಿ ನಿರ್ಮಾಣ; ಭೂಮಿ ಸವಕಲು; ಕೆರೆಗಳಲ್ಲಿ ಹೂಳೆತ್ತುವ ಕೆಲಸಗಳಿಗೆ ಒತ್ತು ನೀಡಿ ನೀರು ಶೇಖರಣೆ ಮಾಡುವುದು. ಇದರಿಂದ ಕೆರೆ, ಕುಂಟೆಗಳು ತುಂಬಿದಲ್ಲಿ ಅಂತರ್ಜ ಮರು ಪೂರ್ಣ ಆಗುತ್ತವೆ. ಇದರ ಸಮೃದ್ದಿಯಿಂದ ಬೆಳೆ ಬೆಳೆಯಲು ರೈತನಿಗೆ ಸಹಕಾರಿ ಆಗಲಿದೆ ಎಂದು ಹೇಳಿದರು.

ಹೀಗೆ ಮುಂದುವರಿದ ಅವರು, ಇದರಿಂದ ರೈತನ ಆರ್ಥಿಕ ಪರಿಸ್ಥಿತಿ ವೃದ್ದಿಯಾಗಲಿದೆ. ಜತೆಗೆ ದುಡಿಯುವ ಕೈಗೆ ಕೆಲಸ ಸಿಗಲಿದೆ. ರೈತನಿಗೆ ಆರ್ಥಿಕ ಸಂಕಷ್ಠ ಉಂಟಾಗುವುದೆ ನೀರಿನಿಂದ. ಹಾಗಾಗಿ ಕೊಳವೆ ಬಾವಿ ಕೊರೆಸಲು 4-5 ಲಕ್ಷ ಖರ್ಚು ಮಾಡಬೇಕು. ಅಷ್ಟು ವೆಚ್ಚ ಮಾಡಿದರೂ ನೀರು ಬರುವ ಭರವಸೆ ಇಲ್ಲದಂತಾಗಿದೆ ಎನ್ನುತ್ತಾರೆ ಕೆ.ಎಸ್​ ಈಶ್ವರಪ್ಪ.

ನೀರಿನ ಅಭಾವದಿಂದ ಅದೆಷ್ಟೋ ಕೈಗೆ ಬಂದ ಬೆಳೆ ಹಾಳಾದ ನಿದರ್ಶನಗಳು ಇವೆ. ಅದರೊಂದಿಗೆ ಶುದ್ದ ಕುಡಿಯುವ ನೀರಿಲ್ಲದೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಾ ಇದ್ದಾರೆ. ಅದಕ್ಕಾಗೆ ಶುದ್ದ ಕುಡಿಯುವ ನೀರು ವ್ಯವಸಾಯಕ್ಕೆ ಸಂಪೂರ್ಣ ನೀರಾವರಿ ಒದಗಿಸುವ ನಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೂಕ್ಷ್ಮವಾಗಿ ಪರಿಗಣಿಸಿದ್ದು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close