Uncategorizedಕರ್ನಾಟಕ ಸುದ್ದಿರಾಯಚೂರು ಜಿಲ್ಲೆ ಸುದ್ದಿ

ರಾಯಚೂರು ಭತ್ತದ ನಾಡಿಗೂ ಆಕ್ರಮೀಸಿತಾ? ಮಹಮಾರಿ ಕೊರೋನ…?6 ಪಾಸಿಟಿವ್ ಬರುವ ಸಾಧ್ಯತೆ!

ರಾಯಚೂರಿಗೂ ಕಾಲಿಟ್ಟ ಕೊರೋನಾ; 6 ಜನರಲ್ಲಿ ಕೊರೋನಾ ಪಾಸಿಟಿವ್, ಇಂದು ವರದಿ ಬರುವ ಸಾಧ್ಯತೆ

ಕಳೆದ 50 ದಿನಗಳಿಂದ ಕೊರೊನಾ ಪಾಸಿಟಿವ್ ಇಲ್ಲದೆ ಹಸಿರು ವಲಯದಲ್ಲಿದ್ದ ರಾಯಚೂರುಗೆ ಕೊನೆಗೂ ಕೋವಿಡ್ -19 ಕಾಲಿಟ್ಟಿದೆ.
ಮಹಾರಾಷ್ಟ್ರ ದಿಂದ ಮೇ 13 ರಂದು ರಾಯಚೂರು ಜಿಲ್ಲೆಗೆ ಆಗಮಿಸಿದವರನ್ನು ಪರೀಕ್ಷೆಗೊಳಪಡಿಸಿದಾಗ 6 ಜನರಲ್ಲಿ ಪಾಸಿಟಿವ್ ಇರುವುದು ತಿಳಿದುು ಬಂದಿದ್ದು, ಇನ್ನುನೂ ಅಧಿಕೃತವಾಗಿ

ಅವರ ತಪಾಸಣೆ ವರದಿ ನಿನ್ನನೆ ಜಿಲ್ಲಾಡಳಿತದ ಕೈ ಸೇರಿದ್ದು ರಾಯಚೂರು ನಗರದಲ್ಲಿ 4 ಮತ್ತು ದೇವದುರ್ಗದ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ಇರುವುದು ದೃಢಪಡಿಸಿದ್ದಾರೆ.
ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತುರ್ತು ಸಭೆ ನಡೆಸಿ, ಪಾಸಿಟಿವ್ ಬಂದವರನ್ನು ಚಿಕಿತ್ಸೆಗೆ ಒಳಪಡಿಸುವ ಸಂಬಂಧ ಆರೋಗ್ಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಪಾಸಿಟಿವ್ ಪ್ರಕರಣದ ರೋಗಿಗಳನ್ನು ನಿಯೋಜಿತ ಕೋವಿಡ್ ಆಸ್ಪತ್ರೆಗೆ‌ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಈ ಪೈಕಿ ಇಬ್ಬರು ದೇವದುರ್ಗ ತಾಲೂಕಿನ ಮಸರಕಲ್ ಕ್ವಾರಂಟೈನ್ ನಲ್ಲಿದ್ದು, ಉಳಿದ ನಾಲ್ವರು ರಾಯಚೂರು ನಗರದಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ.
ಇವರೆಲ್ಲಾ ವಾಹನ ಮೂಲಕ ರಾಯಚೂರು ಜಿಲ್ಲೆ ಪ್ರವೇಶ ಮಾಡಿ ನೇರವಾಗಿ ಕ್ವಾರಂಟೈನ್ ನಲ್ಲಿ ಸೇರಿದ ಬಳಿಕ ಗಂಟಲು ದ್ರವ ಪರೀಕ್ಷೆನಂತರ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇದೀಗ ಪಾಸಿಟಿವ್ ಬಂದ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಮುಂದಾಗಿದೆ.
ಕಳೆದ 50 ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದ ರಾಯಚೂರು ಜಿಲ್ಲೆಗೆ ಲಾಕ್ ಡೌನ್ ಮೂರನೆ ಹಂತ ಕೊನೆಗೊಳ್ಳುವ ದಿನವಾದ ಇಂದು ಒಂದೇ ದಿನ 6 ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಆತಂತಕ್ಕೆ ಕಾರಣವಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close