ಮಾನವಿರಾಯಚೂರು ಜಿಲ್ಲೆ ಸುದ್ದಿ

ಮಾನ್ವಿ : ದಿ. ರಾಜಾ ಹನುಮಪ್ಪ ನಾಯಕ ಸೇವಾ ಸಂಸ್ಥೆ ಮತ್ತು ದಿ. ರಾಜಾ ಸಂಜೀವ ನಾಯಕ ಫೌಂಡೇಶನ್ ವತಿಯಿಂದ ಅಹಾರ ಧಾನ್ಯಗಳ ಕಿಟ್ ವಿತರಣೆ

ವರದಿ : ಶಿವುಕುಮಾರ ಮಾನ್ವಿ

ಮಾನ್ವಿ ಮೇ.18 : ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿಂದು ದಿ. ರಾಜಾ ಹನುಮಪ್ಪ ನಾಯಕ ಸೇವಾ ಸಂಸ್ಥೆ ಮತ್ತು ದಿ. ರಾಜಾ ಸಂಜೀವ ನಾಯಕ ಫೌಂಡೇಶನ್ ವತಿಯಿಂದ ಮಾನವಿ ಪಟ್ಟಣದ ತೊಗಟವೀರ ಕ್ಷತ್ರಿಯ, ಅಕ್ಕಸಾಲಿಗರ. ಉಪ್ಪಾರ, ಹಡಪದ, ಕುಂಬಾರ, ನದಾಫ ಸಮಾಜದ ಆಯ್ದ ಕೆಲ ಕಡುಬಡವರಿಗೆ ಮತ್ತು ರೊಟ್ಟಿ. ಮಾಡುವ ಮಹಿಳೆಯರಿಗೆ ಸುಮಾರು 200 ಅಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.

ಅಹಾರಧಾನ್ಯಗಳ ವಿತರಣೆ ಮಾಡಿ, ಮಾತನಾಡಿದ ಶ್ರೀ ರಾಜಾ ವಸಂತ ನಾಯಕರವರು ಸಾರ್ವಜನಿಕರು ಆತಂಕಕ್ಕೊಳಗಾಗದೆ ಸರ್ಕಾರ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತ್ತು ಮಾಸ್ಕಗಳನ್ನ ಧರಿಸುವ ಮೂಲಕ ಕೊರೊನಾ ವಿರುದ್ಧದ ಸಮರದಲ್ಲಿ ನಾವೆಲ್ಲರೂ ಸುರಕ್ಷಿತವಾಗಿರೋಣ ಎಂದು ಹೇಳಿದರು

ಈ ಸಂದರ್ಮಾಭದಲ್ಲಿ ಮಾನ್ವಿ ಪಟ್ಟಣದ ಮೆಕ್ಯಾನಿಕ್ ಗಳಿಗೆ, ವಿಕಲಚೇತನರಿಗೆ, ಆಶಾ ಕಾರ್ಯಕರ್ತರಿಗೆ, ಕೂಲಿ ಕಾರ್ಮಿಕರಿಗೆ ಇವರಿಗೆ 1200ಕ್ಕೂ ಅಧಿಕ ಆಹಾರ ಧಾನ್ಯಗಳ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ವಿತರಣೆ ಮಾಡಲಾಗಿದೆ ಎಂದರು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close