ಕರ್ನಾಟಕ ಸುದ್ದಿ

ಬ್ರೇಕಿಂಗ್ ನ್ಯೂಸ್ : ಕೃಷ್ಣ ನದಿ ನೀರು ಹಂಚಿಕೆ ಕುರಿತು ಮಹಾರಾಷ್ಟ್ರ ನೀರಾವರಿ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ: ರಮೇಶ್ ಜಾರಕಿಹೊಳಿ

ಗೋಕಾಕ್ ಗಟ್ಟಿ ಬಸವಣ್ಣ ಡ್ಯಾಂ ನಿರ್ಮಾಣ ವಿಚಾರವನ್ನು ಪ್ರಸ್ತಾಪಿಸಿದ ಜಾರಕಿಹೊಳಿ, ಅರಣ್ಯ ಪ್ರದೇಶ, ಗ್ರಾಮಗಳಿಗೆ ಹಾನಿ ಇಲ್ಲ.

ಕೃಷ್ಣ ನದಿ ನೀರು ಹಂಚಿಕೆ ವಿಚಾರದ ಕುರಿತು ಶೀಘ್ರದಲ್ಲೇ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ ಪಾಟೀಲ್ ಭೇಟಿ ಮಾಡಿ ಚರ್ಚೆ ನಡೆಸಲಾಗವುದು. ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಆದರೆ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಈ ಸಭೆಯನ್ನು ಮುಂದೂಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಕಳಸಾ, ಬಂಡೂರಿ ಕಾಮಗಾರಿ ವಿಚಾರದ ಬಗ್ಗೆ ಮಾತನಾಡಿದ ಅವರು, ದೆಹಲಿಗೆ ಹೋಗಲು ವಿಮಾನ ಸೌಲಭ್ಯ ಇಲ್ಲ. ಹೀಗಾಗಿ ಹೋಗಲು ಆಗಿಲ್ಲ. ಶೀಘ್ರದಲ್ಲೇ ರಸ್ತೆಯ ಮೂಲಕವೇ ದೆಹಲಿಗೆ ಹೋಗಿ ಕೇಂದ್ರ ಜತೆಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಲಾಶಯಕ್ಕೆ ಭೇಟಿ ನೀಡಿದ್ದೇನೆ. ಏನೆಲ್ಲ ಕೆಲಸ ಆಗಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಾಗುವುದು. ಸಿಎಂ ಯಡಿಯೂರಪ್ಪ ಮಾರ್ಗದರ್ಶನಲ್ಲಿ ಕೆಲಸ ಮಾಡುತ್ತೇನೆ ಎಂದರು.

ಗೋಕಾಕ್ ಗಟ್ಟಿ ಬಸವಣ್ಣ ಡ್ಯಾಂ ನಿರ್ಮಾಣ ವಿಚಾರವನ್ನು ಪ್ರಸ್ತಾಪಿಸಿದ ಜಾರಕಿಹೊಳಿ, ಅರಣ್ಯ ಪ್ರದೇಶ, ಗ್ರಾಮಗಳಿಗೆ ಹಾನಿ ಇಲ್ಲ. ನಿರ್ವಾಣೇಶ್ವರ ದೇವಸ್ಥಾನ ಮುಳುಗಡೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರು, ಕೆರೆ ತುಂಬುವ ಯೋಜನೆಗೆ, ನವಿಲಿ ಡ್ಯಾಂ, ಗಟ್ಟಿ ಬಸವಣ್ಣ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ನವಲಿ ಡ್ಯಾಂ ನಿರ್ಮಾಣಕ್ಕೆ ತೆಲಂಗಾಣ, ಆಂಧ್ರ ಪ್ರದೇಶ ಸಹಕಾರ ಅಗತ್ಯ ಎಂದು ಹೇಳಿದರು.

ಇನ್ನು ಕೊರೋನಾ ವೈರಸ್ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಕೊರೋನಾ ವೈರಸ್​ನಿಂದ ಜನ ಸಾಯುತ್ತಾರೆಂದಲ್ಲ. ಪ್ರಧಾನಿ ಆದೇಶ, ಸಿಎಂ ಸೂಚನೆ, ಆರೋಗ್ಯ ಇಲಾಖೆ ಸಲಹೆ ಪಾಲಿಸಿ. ಇಷ್ಟು ಮಾಡಿದ್ರೆ ಕೊರೋನಾ ವೈರಸ್ ಬರಲ್ಲ ಎಂದರು.

ಸಂಜೆ ನಿಪ್ಪಾಣಿ ಕುಗನೊಳ್ಳಿ ಚೆಕ್ ಪೋಸ್ಟ್ ಭೇಟಿ ನೀಡಿ ಡಿಸಿ, ಎಸ್ಪಿ ಜತೆಗೆ ಭೇಟಿ ನೀಡಿ ಚರ್ಚೆ ನಡೆಸುತ್ತೇನೆ. ಮಹಾರಾಷ್ಟ್ರದಿಂದ ಕಳ್ಳದಾರಿಯ ಮೂಲಕ ನುಸುಳಿಕೊಂಡು ಬರುವವರ  ಬಗ್ಗೆ ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close