ಅಂತರಾಷ್ಟ್ರೀಯಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಭಾರತದಲ್ಲಿ ಒಂದೇ ದಿನ 5,200 ಹೊಸ ಕೊರೋನಾ ಪ್ರಕರಣ; ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ

Posted By : Sirajuddin Bangar

ವಿಶ್ವದೆಲ್ಲೆಡೆ 48 ಲಕ್ಷ ಜನರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಪ್ರಪಂಚದಾದ್ಯಂತ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 3.16 ಲಕ್ಷಕ್ಕೆ ಏರಿಕೆಯಾಗಿದೆ

 ಭಾರತದಲ್ಲಿ ಇಂದಿನಿಂದ ನಾಲ್ಕನೇ ಹಂತದ ಲಾಕ್​ಡೌನ್ ಆರಂಭವಾಗಿದೆ. ಆದರೆ, ದೇಶದ ಬಹುತೇಕ ಕಡೆಗಳಲ್ಲಿ ಹೆಚ್ಚಿನ ವಿನಾಯತಿ ನೀಡಲಾಗಿದೆ. ಪರಿಣಾಮ ಕೊರೋನಾ ವೈರಸ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 5,200 ಹೊಸ ಪ್ರಕರಣ ದಾಖಲಾಗಿದೆ. ಒಂದೇ ದಿನ ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಕಾಣಿಸಿಕೊಂಡಿದ್ದು ಇದೇ ಮೊದಲು.

ನಿನ್ನೆ ಬೆಳಗ್ಗೆಯಿಂದ ಇಂದು ಮುಂಜಾನೆವರೆಗೆ ದೇಶದಲ್ಲಿ ಹೊಸದಾಗಿ 5,242 ಜನರಲ್ಲಿ ಸೋಂಕು ಪತ್ತೆಯಾಗಿದೆ. ನಿನ್ನೆ ಒಂದೇ ದಿನ 157 ಜನರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ 96,169 ಜನರಿಗೆ ಸೋಂಕು ತಗುಲಿದೆ.

96 ಸಾವಿರ ಜನರಲ್ಲಿ 36,823 ಜನರು ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ. 3,229 ಜನರು ಮೃತಪಟ್ಟಿದ್ದಾರೆ. 56,316 ಆಕ್ಟಿವ್​ ಕೇಸ್​ಗಳು ದೇಶದಲ್ಲಿದೆ. ಸದ್ಯ ಕೊರೋನಾ ಪೀಡಿತರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ ನೀಡಿದೆ.

ಇನ್ನು, ವಿಶ್ವದೆಲ್ಲೆಡೆ 48 ಲಕ್ಷ ಜನರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಪ್ರಪಂಚದಾದ್ಯಂತ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 3.16 ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಇದುವರೆಗೂ 18 ಲಕ್ಷ ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close