ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ಕೊರೋನಾ ಹರಡಲು​ ಚೀನಾ ಕಾರಣ‘ – ತನಿಖೆಗೆ ಆಗ್ರಹಿಸಿ ವಿಶ್ವ ಆರೋಗ್ಯ ಸಂಸ್ಥೆ ಮೊರೆ ಹೋದ 62 ದೇಶಗಳು

Posted By : Sirajuddin Bangar

ಜಗತ್ತಿನಾದ್ಯಂತ ಕೊರೋನಾ ವೈರಸ್​ ಹರಡಲು ಚೀನಾ ಕಾರಣ ಎಂದು 62 ದೇಶಗಳು ವಿಶ್ವ ಆರೋಗ್ಯ ಸಂಸ್ಥೆ(WHO) ಮೊರೆ ಹೋಗಿವೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಇಷ್ಟು ದೇಶಗಳು, ಚೀನಾದ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿವೆ. ಹೀಗಾಗಿ ಈ ವಿಚಾರ ಸಂಬಂಧ ಇಂದು ವಿಶ್ವ ಆರೋಗ್ಯ ಸಂಸ್ಥೆ ಸಭೆ ನಡೆಸುತ್ತಿದೆ. ಭಾರತವೂ ಚೀನಾ ವಿರುದ್ಧದ ಪ್ರಸ್ತಾಪಕ್ಕೆ ಧ್ವನಿಗೂಡಿಸಿದೆ. ಆದ್ದರಿಂದ ಇಂದಿನ ಸಭೆ ಚೀನಾದ ಪಾಲಿಗೆ ನಿರ್ಣಾಯಕವಾಗಿದೆ.

ಈ ಹಿಂದೆಯೇ ಚೀನಾ ಲ್ಯಾಬ್​​ನಲ್ಲೇ ಕೊರೋನಾ ವೈರಸ್ ಸೃಷ್ಟಿಯಾಗಿದೆ ಎಂಬ ಅಮೆರಿಕಾ ಆರೋಪವನ್ನು ವಿಶ್ವ ಆರೋಗ್ಯ ಸಂಸ್ಥೆ ತಳ್ಳಿಹಾಕಿತ್ತು. ಕೊರೋನಾ ವೈರಸ್​ ಹರಡುವಿಕೆ ಸಂಬಂಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ ಚೀನಾ ಮೇಲೆ ಮಾಡಲಾದ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು WHO ಹೇಳಿತ್ತು.

ಇನ್ನು, ಕೊರೋನಾ ವೈರಸ್​ ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ಸೃಷ್ಟಿಯಾಗಿದೆ ಎನ್ನುವುದಕ್ಕೆ ಅಮೆರಿಕಾ ಸ್ಪಷ್ಟ ದಾಖಲೆ ನೀಡಿಲ್ಲ. ಯಾವುದೇ ದಾಖಲೆ ನೀಡದೆ ಹೀಗೆ ಆರೋಪ ಮಾಡುತ್ತಿರುವ ಅಮೆರಿಕಾ ಮತ್ತದರ ಬೆಂಬಲಿತ ದೇಶಗಳ ನಡೆ ಸರಿ ಕಾಣುತ್ತಿಲ್ಲ. ಇದು ಹುರುಳಿಲ್ಲದ ಆರೋಪ ಎಂದು WHO ನಿರ್ದೇಶಕ ಮೈಕಲ್ ರಿಯಾನ್ ಹೇಳಿದ್ದರು.

ಹೀಗಿದ್ದರೂ ಅಮೆರಿಕಾ ಮಾತ್ರ ಕೊರೋನಾ ವೈರಸ್ ಚೀನಾದ ಪ್ರಯೋಗಾಲಯದಲ್ಲಿಯೇ ಸೃಷ್ಟಿಯಾದ ವೈರಾಣು ಎಂದು ನಿರಂತರ ದಾಳಿ ಮಾಡುತ್ತಿದೆ. ಚೀನಾದ ವಿರುದ್ಧದ ಈ ಪ್ರಸ್ತಾಪಕ್ಕೆ 62 ದೇಶಗಳು ಧ್ವನಿಗೂಡಿಸಿವೆ. ಇದೇ ವಿಚಾರವಾಗಿ WHO ಸಭೆ ನಡೆಸುತ್ತಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close