ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಕರ್ನಾಟಕ ಹೂಡಿಕೆಯನ್ನು ಹೆಚ್ಚಿಸುವ ಭೂಮಿಯಾಗಿದೆ: ಸಚಿವ ಜಗದೀಶ್ ಶೆಟ್ಟರ್

Posted By : Sirajuddin Bangar\

ಬೆಂಗಳೂರು: ಸಾಂಕ್ರಾಮಿಕ ರೋಗ ಕೊರೋನಾ ಪರಿಣಾಮದ ಬಳಿಕ ದೇಶದ ನಾಲ್ಕನೇ ಅತೀದೊಡ್ಡ ಆರ್ಥಿಕತೆಯ ರಾಜ್ಯವಾಗಿರುವ ಕರ್ನಾಟಕ ದೊಡ್ಡ ಹೂಡಿಕೆಯನ್ನು ಆಕರ್ಷಿಸಲು ಮುಂದಾಗಿದ್ದು, ಇದೀಗ ಜಪಾನ್ ನತ್ತ ಮುಖ ಮಾಡಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಹೂಡಿಕೆದಾರ ಸ್ನೇಹಿ ಶಾಸನವನ್ನು ರೂಪಿಸಲು ಕಾನೂನುಬದ್ಧವಾಗಿ ನಾವು ಸಾಕಷ್ಟು ಶ್ರಮಿಸಿದ್ದೇವೆ. ಈಗಾಗಲೇ ಸುಮಾರು 300 ಎಕರೆ ಭೂಮಿಯನ್ನೂ ಮೀಸಲಿರಿಸಿದ್ದೇವೆ. ಈ ಪ್ರದೇಶಕ್ಕೆ ತಲುಪಲು ಬೆಂಗಳೂರಿನಿಂದ 1 ಗಂಟೆ ಕಾಲ ಕ್ರಮಿಸಲಿದೆ. ನೂರಾರು ಜಪಾನ್ ಕಂಪನಿಗಳಿಗೆ ಪ್ರತ್ಯೇಕವಾಗಿಯೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಅಗತ್ಯ ಬಿದ್ದರೆ ಮತ್ತಷ್ಟು ಭೂಮಿಯನ್ನು ಮೀಸಲಿರಿಸಲಾಗುತ್ತದೆ. ರೂ.500 ಕೋಟಿಗಳ ಯಾವುದೇ ಹೂಡಿಕೆಯನ್ನು ಒಮ್ಮೆಲೆಯಲ್ಲೇ ಮನ್ನಣೆಯನ್ನು ಪಡೆದುಕೊಳ್ಳಲಿದೆ. ಉಳಿದಂತೆ ಯಾವುದೇ ಹೂಡಿಕೆಯನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಒಪ್ಪಿಗೆ ನೀಡಲಿದ್ದಾರೆ. ಇದರಿಂದ ನಮ್ಮ ಮೇಲೆ ಕೇಳಿ ಬರುತ್ತಿರುವ ಅಧಿಕಾರ ಶಾಹಿ ಎಂಬ ಪಟ್ಟಿ ಕೂಡ ಅಳಿಸಲಿದೆ.

ಈಗಾಗಲೇ ಹೂಡಿಕೆದಾರರಿಗೆ ಸಂಬಂಧಿಸಿದ ವಿಚಾರಗಳ ಪರಿಶೀಲನೆಗಾಗಿ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ಅವರ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಆರ್ಥಿಕ ಕಾರ್ಯದರ್ಶಿಗಳು ಹಾಗೂ ಇನ್ನಿತರೆ ಹಿರಿಯ ಅಧಿಕಾರಿಗಳು ಇರಲಿದ್ದಾರೆಂದು ತಿಳಿಸಿದ್ದಾರೆ.

ಸಮಿತಿಯು ಜಪಾನ್ ಸೇರಿದಂತೆ ಹೂಡಿಕೆ ಬರುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸುತ್ತದೆ. ಸಮಿತುಯ ಹೂಡಿಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಹಾಗೂ ಅನುಮಾನಗಳನ್ನು ನಿವಾರಿಸಿ, ಹೂಡಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈಗಾಗಲೇ ಜಾಗತಿಕ ತಜ್ಞರನ್ನು ಸಂಪರ್ಕಿಸುತ್ತಿದ್ದು, ರಾಜ್ಯದಲ್ಲಿ ಜಪಾನ್ ರಾಷ್ಟ್ರದ ಹೂಡಿಕೆಗಲನ್ನು ಹೆಚ್ಚಿಸಲು ಉತ್ಸುಕರಾಗಿದ್ದೇವೆ. ಈ ವರೆಗೂ ಜಪಾನ್ ನಿಂದ 1,300ಕ್ಕೂ ಹೆಚ್ಚು ಕಂಪನಿಗಳು ಹೂಡಿಕೆ ಮಾಡಿವೆ. ಆದರೆ, ಅದು ಆ ದೇಶದಿಂದ ವಿದೇಶದಲ್ಲಿ ಕೇವಲ 5 ಪ್ರತಿ ಶತದಷ್ಟು ಹೂಡಿಕೆಗಳನ್ನು ಹೊಂದಿದೆ. ಚೀನಾದಲ್ಲಿ ಅದರ ಹೂಡಿಕೆಗಳು ಸುಮಾರು 4 124 ಬಿಲಿಯನ್’ರಷ್ಟಿದೆ. ಆದರೆ 25 2.25 ಬಿಲಿಯನ್ ಅನ್ನು ಚೀನಾದಿಂದ ಜಪಾನ್‌ಗೆ ಅಥವಾ ಬಹುಶಃ ಇತರೆ ದೇಶಗಳಿಗೆ ತರುವಂತಹ ಬದ್ಧತೆಯನ್ನೂ ಅದು ಹೊಂದಿದೆ ಎಂದಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close