ಕರ್ನಾಟಕ ಸುದ್ದಿ

KSRTC ಬಸ್ ಸಂಚಾರ ಆರಂಭಕ್ಕೆ ಸಕಲ ಸಿದ್ದತೆ : ಸರ್ಕಾರದ ಆದೇಶಕ್ಕೆ ಕಾಯುತ್ತಿರುವ ಅಧಿಕಾರಿಗಳು

ನ್ಯೂಸ್ : ಸಿರಾಜುದ್ದಿನ್ ಬಂಗಾರ್

ರಾಜ್ಯಾದ್ಯಂತ ಬಸ್ ಸಂಚಾರ ಆರಂಭಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಕಲ ಸಿದ್ದತೆ ಮಾಡಿಕೊಂಡಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಈಗಾಗಲೇ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದಾರೆ.

ಮೆಜೆಸ್ಟಿಕ್​​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೋಗಲು ಮಾರ್ಕಿಂಗ್ ಮಾಡಿರುವ ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಿದ್ದಾರೆ. ಕೆಎಸ್​ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್ ಕೌಂಟರ್ ನಿಂದ ಬಸ್ ಸ್ಟಾಪ್ ವರೆಗೆ ಪ್ರಯಾಣಿಕರು ಸಾಮಾಜಿಕ ಅಂತರದಲ್ಲೆ ಸಾಗಬೇಕಿದೆ. ಪ್ರತಿಯೊಬ್ಬ ಪ್ರಯಾಣಿಕರು ಕನಿಷ್ಟ 5 ಅಡಿ ಅಂತರವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.

ಇಂದು ಲಾಕ್ ಡೌನ್ 3.0 ಮುಕ್ತಾಯಗೊಳ್ಳಲಿದ್ದು, ನಾಳೆಯಿಂದ ಲಾಕ್ ಡೌನ್ 4.0 ಕೆಲವು ಹೊಸ ಷರತ್ತುಗಳೊಂದಿಗೆ ಜಾರಿಯಾಗಲಿದೆ. ಅದರಲ್ಲಿ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಗಳಿದ್ದು ಅದಕ್ಕಾಗಿ ಕೆಎಸ್​​ಆರ್​ಟಿಸಿ ಅಧಿಕಾರಿಗಳು ಪೂರ್ವ ಸಿದ್ದತೆಗಳನ್ನ ಕೈಗೊಂಡಿದ್ದಾರೆ. ಈಗಾಗಲೇ ಕೆಎಸ್​ಆರ್​ಟಿಸಿ ಚಾಲಕ ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದ್ದಾರೆ.

ಪ್ರತಿನಿತ್ಯ ಸಾವಿರಾರು ಜನರು ಕೆಎಸ್​ಆರ್​ಟಿಸಿ ಬಸ್​​ ನಲ್ಲಿ ರಾಜ್ಯಾದ್ಯಂತ ಪ್ರಯಾಣ ಮಾಡುತ್ತಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುಲು ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಬಸ್ ಸಂಚಾರ ಆರಂಭಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಕೆಎಸ್​ಆರ್​ಟಿಸಿ ಬಸ್ ಗಳು ರಸ್ತೆಗೆ ಇಳಿಯಲು ಸಿದ್ದವಾಗಿವೆ. ಆದರಿಂದ ಇಂದಿನಿಂದಲೇ ಪೂರ್ವ ತಯಾರಿ ಕೈಗೊಂಡಿರುವ ಅಧಿಕಾರಿಗಳು ಸರ್ಕಾರದ ಆಧಿಕೃತ ಆದೇಶ ಹೊರ ಬೀಳುತ್ತಿದ್ದಂತೆ ಬಸ್ ಗಳನ್ನ ರಸ್ತೆಗೆ ಇಳಿಸಲು ಮುಂದಾಗಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close