ಅಂತರಾಷ್ಟ್ರೀಯ

ಲಾಕ್ ಡೌನ್ ನಿಂದ ದರ್ಜಿಗಳೂ ಕಂಗಾಲು ; ಮಾಸ್ಕ್ ಹೊಲಿಯುವ ಕಾಯಕ ನೀಡಿ ಮಾನವೀಯತೆ ಮೆರೆದ ಮಾಜಿ ಸಚಿವ ದೇಶಪಾಂಡೆ

Posted By : Sirajuddin Bangar

ಹಳಿಯಾದಲ್ಲಿ ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಮೂಲಕ ಮಾಜಿ ಸಚಿವ ಆರ್​.ವಿ ದೇಶಪಾಂಡೆ ಇಲ್ಲಿನ 20ಕ್ಕೂ ಹೆಚ್ಚು ದರ್ಜಿ ಕುಟುಂಬಕ್ಕೆ ಮಾಸ್ಕ್ ಸಿದ್ದಪಡಿಸುವ ಉದ್ಯೋಗ ನೀಡಿದ್ದಾರೆ.

ಲಾಕ್ ಡೌನ್ ನಿಂದ ಈಗಾಗಲೆ ಶ್ರಮಿಕ ವರ್ಗ ತೀರಾ ಕಷ್ಟದ ದಿನಗಳನ್ನ ಎದುರಿಸುತ್ತಿದೆ. ಧಾನಿಗಳು ಕೊಟ್ಟ ಒಂದಿಷ್ಟು ಅಗತ್ಯ ವಸ್ತುಗಳ ಕಿಟ್ ನಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಇದು ಶಾಶ್ವತ ಪರಿಹಾರ ಅಲ್ಲ. ಇಂತಹ ಶ್ರಮಿಕ ವರ್ಗದಲ್ಲಿ ಒಂದಾದ ದರ್ಜಿ ಕುಟುಂಬಗಳಿಗೆ ಮಾಜಿ ಸಚಿವ ಆರ್.ವಿ ದೇಶಪಾಂಡೆ ನೆರವಾಗಿದ್ದಾರೆ.

ಬಟ್ಟೆಗೆ ರೂಪ ಕೊಟ್ಟು ಜನರ ಹಬ್ಬದ ಸಂಭ್ರಮಕ್ಕೆ ಕಾರಣವಾಗುತ್ತಿದ್ದ ದರ್ಜಿಗಳು ಈಗ ಲಾಕ್ ಡೌನ್ ನಿಂದ ಹಬ್ಬ ಹರಿದಿನ ಮದುವೆ ಮುಂಜಿ ಇಲ್ಲದೆ ಕಷ್ಟದ ದಿನಗಳನ್ನ ಎದುರಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲೂ ಕೂಡಾ ದರ್ಜಿಗಳ ಆರ್ಥಿಕ ಸಮಸ್ಯೆ ದಿನದಿಂದ ದಿನಕ್ಕೆ ತಾರಕಕ್ಕೆರುತ್ತಿದೆ. ಈ ನಡುವೆ ಹಳಿಯಾದಲ್ಲಿ ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಮೂಲಕ ಮಾಜಿ ಸಚಿವ ಆರ್​.ವಿ ದೇಶಪಾಂಡೆ ಇಲ್ಲಿನ 20ಕ್ಕೂ ಹೆಚ್ಚು ದರ್ಜಿ ಕುಟುಂಬಕ್ಕೆ ಮಾಸ್ಕ್ ಸಿದ್ದಪಡಿಸುವ ಉದ್ಯೋಗ ನೀಡಿದ್ದಾರೆ.

ತಮ್ಮ ಟ್ರಸ್ಟ್ ಮೂಲಕ ಸುಮಾರು ಐವತ್ತು ಸಾವಿರ ಮಾಸ್ಕ್ ತಮ್ಮ ಕ್ಷೇತ್ರದಲ್ಲಿ ಉಚಿತವಾಗಿ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾಸ್ಕ್ ಗೆ ಬೇಕಾದ ಅಗತ್ಯ ವಸ್ತುಗಳನ್ನ ತಮ್ಮ ಟ್ರಸ್ಟ್ ಮೂಲಕ ನೀಡಿ ಮಾಸ್ಕ್ ಸಿದ್ದಪಡಿಸುವ ಕೆಲಸವನ್ನ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದರ್ಜಿ ಕುಟುಂಬಕ್ಕೆ ನೀಡಿ ಅವರಿಗೆ ಸಂಭಾವನೆ ನೀಡುತ್ತಿದ್ದಾರೆ. ಇದರಿಂದ ದರ್ಜಿಗಳ ಕುಟುಂಬ ಲಾಕ್ ಡೌನ್ ಸಮಯದಲ್ಲಿ ಒಪ್ಪತ್ತಿನ ಊಟ ಸಿಗುತ್ತಿದೆ ಅಂತಿದ್ದಾರೆ.

ಇನ್ನೂ ದೇಶಪಾಂಡೆ ಟ್ರಸ್ಟ್ ಮೂಲಕ ಹಳಿಯಾಳ, ಜೋಯಿಡಾ, ದಾಂಡೇಲಿಯಲ್ಲಿ ಐವತ್ತು ಸಾವಿರ ಮಾಸ್ಕ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಹೊರತಾಗಿಯೂ ಕೂಡಾ ಅಗತ್ಯವಿದ್ದಲ್ಲಿ ಮಾಸ್ಕ್ ನೀಡಲಾಗುತ್ತಿದೆ. ಜತೆಗೆ ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಬಡಕುಟುಂಬ ಮತ್ತು ಶ್ರಮಿಕ ವರ್ಗಕ್ಕೆ ಅಗತ್ಯವಸ್ತುಗಳ ಕಿಟ್ ಗಳನ್ನ ಕೂಡಾ ನೀಡಲಾಗಿದೆ. ಇಷ್ಟು ದಿನ ಕೆಲಸ ಇಲ್ಲ ಎಂದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಟೈಲರ್ ಗಳ ಕುಟುಂಬಕ್ಕೆ ದೇಶಪಾಂಡೆಯವರು ಮಾಸ್ಕ್ ಸಿದ್ದಪಡಿಸುವ ಮೂಲಕ ಉದ್ಯೋಗ ನೀಡಿದ್ದಾರೆ.

ಸಾವಿರಾರು ಟೈಲರ್ ಗಳು ಇವತ್ತು ಸಂಕಷ್ಟದ ದಿನವನ್ನ ಎದುರಿಸುತ್ತಿದ್ದಾರೆ ಈ ಮದ್ಯೆ ಹಳಿಯಾಳದ ಒಂದಿಷ್ಟು ಟೈಲರ್ ಗಳಿಗೆ ದೇಶಪಾಂಡೆ ಟ್ರಸ್ಟ್ ದಾರಿ ದೀಪವಾಗಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close