ಅಂತರಾಷ್ಟ್ರೀಯ

ಭಿಕ್ಷೆ ಬೇಡಿಯಾದರೂ ಅಥವಾ ಸಾಲ ಮಾಡಿಯಾದರು ಕಾರ್ಮಿಕರಿಗೆ ಸಹಾಯ ಮಾಡುತ್ತೇನೆ; ಪ್ರಕಾಶ ರೈ-ಟ್ವಿಟರ್

ವರದಿ : ಸಿರಾಜುದ್ದೀನ್ ಬಂಗಾರ್

ಕೊರೋನಾ ಲಾಕ್​ಡೌನ್​ನಿಂದಾಗಿ ಕೆಲಸ ಮಾಡಲು ಬಂದಿದ್ದ ಕಾರ್ಮಿಕರ ವಲಸೆ ನಡೆಯುತ್ತಿದೆ. ಲಾಕ್​ಡೌನ್​ ಆರಂಭವಾದಾಗಿನಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಗೂಡುಗಳನ್ನು ಸೇರಿಕೊಳ್ಳಲು ತುಂಬಾ ಕಷ್ಟಪಡುತ್ತಿದ್ದಾರೆ. 

ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಶ್ರಮಿಕ್​ ರೈಲು ಹಾಗೂ ಬಸ್ಸುಗಳ ವ್ಯವಸ್ಥೆ ಮಾಡಿಸಿದೆ. ಅದಕ್ಕೂ ಮೊದಲು ಸಾಕಷ್ಟು ಮಂದಿ ಕಾರ್ಮಿಕರು ತಮ್ಮ ಊರು ಹಾಗೂ ರಾಜ್ಯಗಳಿಗೆ ಸೇರಲು ಕಾಲ್ನಡಿಗೆಯಲ್ಲೇ ಹೊರಟಿದ್ದರು. ಅನ್ನ-ನೀರು ಇಲ್ಲದೆ ಪರದಾಡಿದ ವಲಸೆ ಕಾರ್ಮಿಕರ ಕಷ್ಟಕ್ಕೆ ಸಾಕಷ್ಟು ಸಂಘ ಸಂಸ್ಥೆಗಳು ಹಾಗೂ ಸೆಲೆಬ್ರಿಟಿಗಳು ಸ್ಪಂದಿಸುತ್ತಿದ್ದಾರೆ.

ಇದಕ್ಕೆ ನಟ ಪ್ರಕಾಶ್​ ರೈ ಸಹ ಹೊರತಾಗಿಲ್ಲ. ಲಾಕ್​​ಡೌನ್​ ಆರಂಭವಾದಾಗಿನಿಂದಲೂ ಪ್ರಕಾಶ್​ ರೈ ಬಡ ಜನರು ಹಾಗೂ ಕೂಲಿ ಕಾರ್ಮಿಕರಿಗೆ ಅನ್ನಾಹಾರ ನೀಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗಲೂ ಸಹ ಭಿಕ್ಷೆ ಬೇಡಿ ಅಥವಾ ಸಾಲ ಮಾಡಿಯಾದರೂ ವಲಸೆ ಕಾರ್ಮಿಕರಿಗೆ ನೆರವಾಗುವುದಾಗಿ ಟ್ವೀಟ್​ ಮಾಡಿದ್ದಾರೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close