ಕರ್ನಾಟಕ ಸುದ್ದಿ

ಬೆಂಗಳೂರಿನಲ್ಲಿ ‌ಇಂದು ಸಂಜೆಯಿಂದ ಗುಡುಗು ಸಹಿತ ಮಳೆ; ವೀಕೆಂಡ್ ಗೆ ತಂಪೆರಿದ ಮಳೆರಾಯ

By : SB

ಕಳೆದೊಂದು ವಾರದಿಂದ ವಿಪರೀತ ಬಿಸಿಲಿನ ಝಳಕ್ಕೆ ಬಸವಳಿದಿದ್ದ ಬೆಂಗಳೂರು ಇಂದು ರಾತ್ರಿ ಸುರಿದ ಮಳೆಯಿಂದ ತಂಪಾಗಿದೆ. ವಿಪರೀತ ಬಿಸಿಲಿಂದ ಕಾದು ಬಿಸಿಯಾಗಿದ್ದ ಸಿಲಿಕಾನ್​ ಸಿಟಿಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ರಾತ್ರಿ ಸುಮಾರು 7.30ರಿಂದ ಶುರುವಾದ ಮಳೆ ಬೆಂಗಳೂರನ್ನು ಹಸಿಗೊಳಿಸಿದೆ.

ವೀಕೆಂಡ್​ನಲ್ಲಿ ಮಳೆಯಾಗಿದ್ದರಿಂದ ಬೆಂಗಳೂರಿನಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆ ಉಂಟಾಗಿಲ್ಲ. ಮೆಜೆಸ್ಟಿಕ್ ಸುತ್ತಮುತ್ತ, ಕೆ.ಆರ್​. ಮಾರ್ಕೆಟ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಸಿಲ್ಕ್​ಬೋರ್ಡ್​, ಜಯನಗರ, ಜೆ.ಪಿ. ನಗರ, ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ಮಳೆಯಾಗಿದೆ.

ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು- ಮಿಂಚು ಸಹಿತ ತುಂತುರು ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಅಂಫಾನ್​ ಚಂಡಮಾರುತ ಎದ್ದಿದೆ. ಇದರ ಪರಿಣಾಮ ಕರ್ನಾಟಕದ ಕೆಲವು ಪ್ರದೇಶಗಳಲ್ಲೂ ಆಗಲಿದೆ ಎನ್ನಲಾಗಿತ್ತು. ಅದೇ ಕಾರಣದಿಂದ ಇಂದು ಬೆಂಗಳೂರಿನಲ್ಲಿ ಮಳೆಯಾಗಿರುವ ಸಾಧ್ಯತೆಯಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close