ಕರ್ನಾಟಕ ಸುದ್ದಿ

ಪ್ಲ್ಯಾಶ ನ್ಯೂಸ್: ಮೇ.31ರ ವರೆಗೆ ಲಾಕಡೌನ ವಿಸ್ತರಣೆ; ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

Posted By : Sirajuddin Bangar, Editor KJ

Source : ANI

ದೇಶದೆಲ್ಲೆಡೆ 3ನೇ ಹಂತದ ಲಾಕ್​ಡೌನ್​ ಇಂದಿಗೆ ಅಂತ್ಯಗೊಳ್ಳಲಿದೆ. ನಾಳೆಯಿಂದ 4ನೇ ಹಂತದ ಲಾಕ್​ಡೌನ್​ ಜಾರಿಗೆ ಬರುವುದಾಗಿ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು. ಅದರಂತೆ, ಮೇ 31ರವರೆಗೆ ದೇಶಾದ್ಯಂತ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿದೆ. ಹೊಸ ಲಾಕ್​ಡೌನ್​ನ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ದೇಶದಲ್ಲಿ ಮೇ 31ರವರೆಗೆ ರೈಲು, ಮೆಟ್ರೋ, ವಿಮಾನ ಸಂಚಾರವನ್ನು ನಿಷೇಧಿಸಲಾಗಿದೆ. ವೈದ್ಯಕೀಯ ಉಪಕರಣಗಳು ಮತ್ತು ವಸ್ತುಗಳ ಸಾಗಾಟಕ್ಕೆ ಮಾತ್ರ ವಿಮಾನವನ್ನು ಬಳಸಲು ಅವಕಾಶ ನೀಡಲಾಗಿದೆ. ಶಾಲೆಗಳು, ಕಾಲೇಜುಗಳು ಮುಂತಾದ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಮೇ 31ರವರೆಗೆ ತೆರೆಯುವಂತಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್​ಗಳ್ನನು ತೆರೆಯಲು ಅವಕಾಶ ನೀಡಲಾಗಿದೆ. ಹಾಗೇ, ಆಯಾ ರಾಜ್ಯಗಳ ರೆಡ್, ಗ್ರೀನ್ ಮತ್ತು ಆರೆಂಜ್​ ಜೋನ್​ಗಳಲ್ಲಿ ನಿಯಮಗಳನ್ನು ಸಡಿಲಗೊಳಿಸುವ ಮತ್ತು ಬಿಗಿಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.

ಭಾರತದಲ್ಲಿ 4ನೇ ಹಂತದ ಲಾಕ್​ಡೌನ್​ ಘೋಷಿಸಲಾಗಿದೆ.  ಕೇಂದ್ರ ಸರ್ಕಾರದ ಆದೇಶಕ್ಕೂ ಮೊದಲೇ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಮೇ 31ರವರೆಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಈ ಎರಡು ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ವಿಸ್ತರಿಸಲಾಗಿದೆ. ಕರ್ನಾಟಕದಲ್ಲಿ ಕೂಡ ಮೇ 19ರವರೆಗೂ ಲಾಕ್​ಡೌನ್​ ವಿಸ್ತರಿಸಲಾಗಿದ್ದು, ಮೇ 31ರವರೆಗೆ ಲಾಕ್​ಡೌನ್​ ವಿಸ್ತರಿಸುವ ಸಾಧ್ಯತೆಯಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close