ಕರ್ನಾಟಕ ಸುದ್ದಿ

ಕೊರೋನ ಲಾಕಡೌನ ಎಫೆಕ್ಟ್: ರಾಜ್ಯಾದ್ಯಂತ ನೂರಾರು ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳಿಗೆ ಬೀಗ?

Posted By : Sirajuddin Bangar

ಲಾಕ್​ಡೌನ್​ 54ನೇ ದಿನಕ್ಕೆ ಕಾಲಿಟ್ಟಿದೆ. ಸತತ ಲಾಕ್​ಡೌನ್​ನಿಂದಾಗಿ ಅನೇಕ ಅಂಗಡಿಗಳು ಈಗಾಗಲೇ ಮುಚ್ಚಲ್ಪಟ್ಟಿವೆ. ಇನ್ನು, ಸಿನಿಮಾ ಕೆಲಸಗಳು ನಡೆಯುತ್ತಿಲ್ಲ. ಇದರಿಂದ, ಸಾಕಷ್ಟು ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಲಾಕ್​ಡೌನ್​ನಿಂದ ಸಾಕಷ್ಟು ಸಿಂಗಲ್​ ಸ್ಕ್ರೀನ್​ ಚಿತ್ರಮಂದಿರಗಳಿಗೆ ಬೀಗ ಬೀಳುವ ಭಯ ಎದುರಾಗಿದೆ.

ರಾಜ್ಯದಲ್ಲಿ 615 ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳಿವೆ. ಬರೋಬ್ಬರಿ 2 ತಿಂಗಳಿಂದ ಈ ಎಲ್ಲ ಚಿತ್ರ ಮಂದಿರಗಳು ಬಂದ್ ಆಗಿವೆ. ಒಂದೊಮ್ಮೆ ಲಕ್​​​ಡೌನ ನ್​ ಪೂರ್ಣಗೊಂಡರೂ ಜನ ಚಿತ್ರಮಂದಿರಕ್ಕೆ ಮೊದಲಿನ ರೀತಿಯಲ್ಲೇ ಬರುತ್ತಾರೆ ಎನ್ನುವ ನಿರೀಕ್ಷೆ ಇಲ್ಲ. ಇದನ್ನು ಅರಿತ ಕೆಲ ನಿರ್ಮಾಪಕರು ತಮ್ಮ ಸಿನಿಮಾವನ್ನು ಥಿಯೇಟರ್​ಗಳಲ್ಲಿ ರಿಲೀಸ್ ಮಾಡದೇ ನೇರವಾಗಿ ಓಟಿಟಿ ಪ್ಲಾಟ್​ಫಾರ್ಮ್ ಮೊರೆ ಹೋಗುತ್ತಿದ್ದಾರೆ. ಇದು ಚಿತ್ರಮಂದಿರ ಮಾಲೀಕರನ್ನು ಚಿಂತೆಗೀಡು ಮಾಡಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ಯಾನರ್​ನಲ್ಲಿ ‘ಲಾ’ ಹಾಗೀ ‘ಫ್ರೆಂಚ್​ ಬಿರಿಯಾನಿ’ ಹೆಸರಿನ ಎರಡು ಸಿನಿಮಾಗಳು ನಿರ್ಮಾಣವಾಗಿದ್ದವು. ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಆದರೆ, ಈ ಎರಡು ಚಿತ್ರಗಳಲ್ಲಿ ಡಿಜಿಟಲ್​ನಲ್ಲಿ ರಿಲೀಸ್ ಮಾಡುವುದಾಗಿ ಪುನೀತ್​​​ ಘೋಷಣೆ ಮಾಡಿದ್ದಾರೆ. ಹೀಗಾಗಿ ಜೂನ್​ನಲ್ಲಿ ‘ಲಾ’, ಜುಲೈನಲ್ಲಿ ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಲಿವೆ. ಈ ಡಿಜಿಟಲ್ ರಿಲೀಸ್ ಟ್ರೆಂಡ್ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸಿನಿಮಾಗಳು ಥಿಯೇಟರ್​ನಲ್ಲಿ ರಿಲೀಸ್​ ಆಗುತ್ತಿಲ್ಲ. ಹೀಗಾಗಿ ಥಿಯೇಟರ್​ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟ ಸಿಲುಕಿದ್ದಾರೆ. ಹೀಗಾಗಿ, ಚಿತ್ರಮಂದಿರದ ಮುಖ್ಯಸ್ಥರಿಗೆ ಹಾಗೂ ಚಿತ್ರರಂಗಕ್ಕೆ ರಾಜ್ಯ ಸರ್ಕಾರ ಆರ್ಥಿಕ ಸಹಾಯ ಘೋಷಿಸಬೇಕೆಂದು ಹಲವರು ಒತ್ತಾಯ ಮಾಡಿದ್ದಾರೆ.

ಮಲ್ಟಿಪ್ಲೆಕ್ಸ್​ನಲ್ಲಿ ಹೊಸ ಕ್ರಮ:

ಮತ್ತೊಂದೆಡೆ ಲಾಕ್​ಡೌನ್ ನಂತರ ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್​ಗಳಲ್ಲಿ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಸಿನಿಮಾ ಹಾಲ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳು ಮಲ್ಟಿಪ್ಲೆಕ್ಸ್​ಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಸ್ಯಾನಿಟೈಸಿಂಗ್, ಮಾಸ್ಕ್, ಪ್ರೇಕ್ಷಕರ ನಡುವೆ ಅಂತರ ಹೇಗೆ ಕಾಯ್ದುಕೊಳ್ಳಬೇಕು ಎಂಬುದರ ಕುರಿತು ಸಾಧ್ಯ ಅಸಾಧ್ಯತೆಗಳ ಬಗ್ಗೆ ಪ್ಲಾನ್​ ನಡೆಯುತ್ತಿದೆ. ಹೀಗಾಗಿ, ಜನರು ಅತ್ತ ಸಾಗುವ ಸಾಧ್ಯತೆ ಹೆಚ್ಚು.

Continue

Related Articles

Leave a Reply

Your email address will not be published. Required fields are marked *

Back to top button
Close
Close