ದೇವದುರ್ಗರಾಯಚೂರು ಜಿಲ್ಲೆ ಸುದ್ದಿ

ಕೊರೋನಾ ವೈರಸ್ ವಿರುದ್ಧ,ರಂಜಾನ್ ಹಬ್ಬದ ಜಾಗೃತಿ ಅಭಿಯಾನ

ವರದಿ : ಆಲಂ ಗಬ್ಬೂರು

ದೇವದುರ್ಗ ದಲ್ಲಿ ಕೊರೋನಾ ವೈರಸ್ ವಿರುದ್ಧ ರಂಜಾನ್ ಹಬ್ಬದ ಜಾಗೃತಿ ಅಭಿಯಾನ

ದೇಶ ವ್ಯಾಪಿ ಹರಡಿರುವ ಮಹಾಮಾರಿ ಕೊರೊನ Covid-19 ದಿಂದಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿದೆ ಈ ಸಮಯದಲ್ಲಿ ಇದೆ ತಿಂಗಳು ಮುಸ್ಲಿಂ ಸಮುದಾಯದ ರಂಜಾನ್ ಹಬ್ಬವು 25-05-2020 ಇದೆ ಮತ್ತು ಈಗ ಯಾವುದೇ ಕಾರಣಕ್ಕೂ ಮಸೀದಿಗಳಲ್ಲಿ ನಮಾಜ್ ಮತ್ತು ಪ್ರಾರ್ಥನೆ ಮಾಡಬಾರದೆಂದು ಸರ್ಕಾರ ಆದೇಶ ಹೊರಡಿಸಿದೆ ಸರ್ಕಾರದ ಆದೇಶ‌ವನ್ನು ಮುಸಲ್ಮಾನ್ ಭಾಂಧವರು ಉಲ್ಲಂಘನೆ ಮಾಡಬೇಡಿ ಮತ್ತು ಸಮಯ ಬಂದರೆ ಹಬ್ಬದ ನಮಾಜ್ ಅನ್ನು ಮನೆಯಲ್ಲಿಯೇ ಮಾಡೋಣ ಅನ್ನೋದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ರಾಯಚೂರು ಜಿಲ್ಲೆ ದೇವದುರ್ಗ ನಗರ ದಲ್ಲಿ ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳದ ವತಿಯಿಂದ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತಡಾ. ನರಸಿಂಗರಾವ್ ಸರಕಿಲ್.ಮೈನುದ್ದೀನ್ ಕಾಟಮಳ್ಳಿ,ಅಮೀನ್ ನದಾಫ್,ಜಿಲ್ಲಾ ಅಧ್ಯಕ್ಷ ಬಾಬಾ, ನೂತನವಾಗಿ ಆಯ್ಕೆ ಆದ ತಾಲೂಕು ಅಧ್ಯಕ್ಷ ಖಾಸಿಂಸಾಬ್ ಎಳ್ಳಿಮನಿ, ಹಾಜಿಸಾಬ ಬಿ, ಪಾಷಾ ಬಡಿಗೇರ್, ಅಲಿಬಾಬಾ ಜಾಲಹಳ್ಳಿ,
ನಾಗರಾಜ್ ತೆಲ್ಕಾರ, ಶಿವಕುಮಾರ್ ಛಲವಾದಿ,ಮಂಜುನಾಥ್ ಸೇರಿದಂತೆ ಗ್ರಾಮದ
ಪ್ರಗತಿಪರ ಚಿಂತಕರು ಸಮುದಾಯದ ಮುಂಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Continue

Related Articles

Leave a Reply

Your email address will not be published. Required fields are marked *

Back to top button
Close
Close