ದೇವದುರ್ಗರಾಯಚೂರು ಜಿಲ್ಲೆ ಸುದ್ದಿ

ಉದ್ಯೋಗ ಖಾತ್ರಿ ಯೋಜನೆ ಅನ್ಯಾಯ;ಕಾರ್ಮಿಕರಿಗೆ ವರ್ಷ ಕಳೆದರೂ ಸಿಗಲಿಲ್ಲ ನಯಾಪೈಸೆ..!

ವರದಿ : ಆಲಂ ಗಬ್ಬೂರು

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ವರ್ಷ ಕಳೆದರು ಸಿಕ್ಕಿಲ್ಲ ದುಡಿದ ಕೂಲಿ

ದೇವದುರ್ಗ ಮೇ.17: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಹಿರೇಬೂದುರು ಗ್ರಾಮ ಪಂಚಾಯತಿಯ ಮಶೀಹಾಳ ಗ್ರಾಮದ ಕೂಲಿ ಕಾರ್ಮಿಕರು ರಾಷ್ಟ್ರೀಯ ಉದ್ಯೋಗ ಖಾತ್ರಿಯ 2019-20 ನೇ ಸಾಲಿನಲ್ಲಿ ಕೆಲಸ ಮಾಡಿದ್ದು , ಒಂದು ವರ್ಷವಾದರೂ ಕೂಲಿ ಕಾರ್ಮಿಕರ ಖಾತೆಗೆ ಹಣ ಜಮಾ ಆಗಿಲ್ಲದೆ ಕಂಗಾಲಾಗಿದ್ದಾರೆ.

ಒಂದು ವರ್ಷದಿಂದ ಗ್ರಾಮ ಪಂಚಾಯತಿಗೆ ಅಲೆದಾಡಿದರು ಮಾನ್ಯ ಪಿ.ಡಿ.ಓ ಇವರು ನೀವು ಕೆಲಸ ಮಾಡಿದ್ದಕ್ಕೆ ಏನು ಗ್ಯಾರಂಟಿ.?ಎಂದು ಕೇಳುತ್ತಿದ್ದಾರೆ ಎಂಬುದು ಕೂಲಿ ಕಾರ್ಮಿಕರ ಗೊಳಾಗಿದೆ.

ಕೆಲಸ ಮಾಡಿದಕ್ಕೆ ಪಿ.ಡಿ.ಓಗೆ ಹಣ ಕೇಳಿದರೆ ನೋಡೋಣ ಚೆಕ್ ಮಾಡಿ ನಿಮಗೆ ತಿಳಿಸುತ್ತೇನೆ ಎಂದು ವರ್ಷದಿಂದಲೂ ಹೇಳುತ್ತಿದ್ದಾರೆ ಎಂಬುದು ಕೂಲಿ ಕಾರ್ಮಿಕರ ಹೇಳಿಕೆಯಾಗಿದೆ .

ಇತ್ತ ಕಂಪ್ಯೂಟರ್ ಆಪರೇಟರ್ ಸೂಗಪ್ಪ ಈತನ ದರ್ಪ ಹೇಳಲಿಕ್ಕಾಗದ ಕಾರಣ ನಾವು ಕೇಳುವುದಕ್ಕೆ ಹೋದಾಗಲೆಲ್ಲ ಯಾಕ ಬಂದ್ರಿ? ಎನ್ ಕೆಲಸ ? ಎಂದು ಅವಾಜ್ ಹಾಕುತ್ತಿದ್ದಾರೆ .

ಕೂಲಿ ಹಣದ ವಿಷಯವಾಗಿ ಚರ್ಚಿಸಿದಾಗ ಇನ್ನೂ ಬಂದಿಲ್ಲ ಬಂದ ಮೇಲೆ ಹೇಳಿ ಕಳುಹಿಸುತ್ತೇನೆ ಆಗ ಬನ್ನಿ ಎಂದು ಹೇಳುತ್ತಿದ್ದಾರೆ . ಹಾಗೇ ಒಂದು ತಿಂಗಳ ನಂತರ ಕೇಳಿದರೆ ಏನೋ ತಪ್ಪಾಗಿದೆ ಅದನ್ನು ಹೇಗಾದರೂ ಸರಿಪಡಿಸಿಕೊಡುತ್ತೇನೆ ಎನ್ನುತ್ತಾರೆ . ಹಾಗೇ ಕೆಲವು ದಿನಗಳನ್ನು ಬಿಟ್ಟು ಹೋದರೆ ನಿಮಗೆ ಹಣ ಬೇಕಾ? ಕೆಲಸ ಬೇಕಾ? ಎಂದು ಕೇಳುತ್ತಿದ್ದಾರೆ .

ಜಾಸ್ತಿ ಮಾತನಾಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಕೆಲಸ ನೀಡುವುದಿಲ್ಲವೆಂದು ಆಧಿಕಾರ ದರ್ಪ ಮರೆಯುತ್ತಿದ್ದಾನೆ . ಎಂದು ದಲಿತ ಸಂಘಟನೆಯ ಒಕ್ಕೂಟ ನ್ಯಾಯಕ್ಕಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂಧರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷರು ಭೀಮ ಶಂಕರ್ ಯಾರಮಾಸಳ್ ರಾಘವೇಂದ್ರ ಕೆಂಗಲ್ ಮತ್ತು ಖಾಸಿಂ ಸಬ್ ಎಳ್ಳಿಮನಿ ಇತರರು ಉಪಸ್ಥಿತರಿದ್ದರು

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close