ಸಿರವಾರ

ಸಿರವಾರ : ರಕ್ತದಾನ ಮಹಾದಾನ, ಒಂದು ಹನಿ ಜೀವ ರಕ್ಷಣೆಗೆ ಸಹಕಾರಿ-ಚಂದ್ರಶೇಖರಯ್ಯ ಸ್ವಾಮೀ ತಾ.ವೈ

ವರದಿ : ಸಿರಾಜುದ್ದೀನ್ ಬಂಗಾರ್

ಸಿರವಾರ ಮೇ.16 : ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ ವೈ ಎಫ್ ಐ) ಮತ್ತು ಭಾರತ ವಿದ್ಯಾರ್ಥಿ ಫೇಡರೇಷನ್ (ಎಸ್ ಎಫ್ ಐ) ತಾಲೂಕು ಸಮೀತಿಗಳ ವತಿಯಿಂದ ಇಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನುದ್ದೇಶಿಸಿ ಮಾತನಾಡಿದ ಮಾನ್ವಿ ತಾಲೂಕಿನ ವೈದ್ಯಾಧಿಕಾರಿಗಳಾದ ಡಾ: ಚಂದ್ರಶೇಖರಯ್ಯ ಸ್ವಾಮೀ ಅವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದು ಹಾಗಯೆ ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇದೆ. ರಕ್ತದಾನ ಮಹಾದಾನ ಒಂದು ಹನಿ ಜೀವ ರಕ್ಷಣೆಗೆ ಸಹಕಾರಿ ಎಂದು ಹೇಳಿದರು.

ಎಲ್ಲಾ ದಾನದಲ್ಲಿ ರಕ್ತದಾನ ಶ್ರೇಷ್ಠದಾನ. ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವರ ಜೊತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ.ರಕ್ತಕ್ಕೆ ಪರ್ಯಾಯ ಇಲ್ಲ. ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು, ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆಬರಬೇಕು ಎಂದು ಸಿರವಾರ ಜೆಡಿಎಸ್ ಯುವಮುಖಂಡರಾದ ಜಿ.ಲೋಕರೆಡ್ಡಿ ಅವರು ಹೇಳಿದರು.

ನಂತರ ಸಿರವಾರ ಪಟ್ಟಣದ ವೈದ್ಯಾಧಿಕಾರಿಗಳಾದ ಡಾ: ಸುನಿಲ್ ಸರೋದೆ ಅವರು ಮಾತನಾಡಿ 18 ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. 1 ಯೂನಿಟ್ ರಕ್ತದಿಂದ 4 ಜನರ ಪ್ರಾಣ ಉಳಿಸಬಹುದಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನ ಇತರರಿಗೆ ಮರುಜನ್ಮ ನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆಯಾಗಿದೆ ಎಂದು ತಿಳಿಸಿದರು.

ಶಿಬಿರಕ್ಕೆ ಆಗಮಿಸಿದ ಹಿರಿಯರು ಹಾಗೂ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರು.

ಈ ಸಂದರ್ಭದಲ್ಲಿ ಸಿರವಾರ ತಾಲೂಕ ವೈದ್ಯಾಧಿಕಾರಿಯಾದ ಡಾ:ಪರಿಮಳ ಮೈತ್ರಿ, ರಾಯಚೂರು ರಿಮ್ಸ್ ವೈದ್ಯಾಧಿಕಾರಿಯಾದ ಡಾ:ಕವಿತಾ ಮತ್ತು ಸಿಬ್ಬಂಧಿ ವರ್ಗ, ಸಿರವಾರ ಸಂಜೀವಿನಿ ಟ್ರಸ್ಟನ ಜ್ಞಾನಮಿತ್ರ ಸಾರ್, ವಿ.ಆರ್.ಎಸ್ ಸಂಸ್ಥೆಯ ಮುಖ್ಯಸ್ಥರಾದ ಟಿ.ಬಸವರಾಜ, ಸಿರವಾರ ಯುವ ಮುಖಂಡರಾದ ಶಿವುಶರಣ ಅರಕೇರಿ, ಹಿರಿಯ ಮುಖಂಡರಾದ ಗ್ಯಾನಪ್ಪ, ಯುವಮುಖಂಡರಾದ ದಾನಪ್ಪ,ನಾಗರಾಜಗೌಡ, ಪ.ಪಂ ಸದಸ್ಯರಾದ ಕೃಷ್ಣನಾಯಕ, SFI ಸಂಘಟನೆಯ ಜಿಲ್ಲಾಧ್ಯಕ್ಷರಾದ ರಮೇಶ ಹೀರಾಪೂರ, SFI ಸಂಘಟನೆಯ ಜಿಲ್ಲಾ ಕಾರ್ಯದರ್ಶಿಯಾದ ಲಿಂಗರಾಜ ಕಂದಕಲ್, ಹಾಗೂ ಸಿರವಾರ SFI ತಾಲೂಕು ಸಮಿತಿಯ ಚಂದ್ರಶೇಖರ, ಪಾರ್ಥ ಯಾದವ,ಚಿದಾನಂದ,ಪ್ರವೀಣಕುಮಾರ,ದೇವೆಗೌಡ,ಶಿವಕುಮಾರ್, ಮಹಮ್ಮದ ರಫೀ ಸೇರಿದಂತೆ ಸಂಘನೆಯ ಎಲ್ಲಾ ಸದಸ್ಯರು ಹಾಗೂ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close