ಅಂತರಾಷ್ಟ್ರೀಯ

ವಲಸೆ ಕಾರ್ಮಿಕರ ಜೊತೆ ರಾಹುಲ್ ಗಾಂಧಿ ಸಂವಾದ

Posted By – Sirajuddin Bangar

Sorce : ANI

ನವದೆಹಲಿ(ಮೇ 16): ಲಾಕ್​ಡೌನ್ ವೇಳೆ ತಿಂಗಳುಗಟ್ಟಲೆ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ಇದೀಗ ತಮ್ಮತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ವಾಪಸ್ಸಾಗಿದ್ಧಾರೆ. ಇನ್ನೂ ಆ ಪ್ರಕ್ರಿಯೆ ಮುಂದುವರಿದಿದೆ. ದೆಹಲಿಯಲ್ಲೂ ಲಕ್ಷಾಂತರ ವಲಸೆ ಕಾರ್ಮಿಕರು ಇದ್ದು, ತಮ್ಮ ತಮ್ಮ ಊರಿಗೆ ಮರಳುತ್ತಲೇ ಇದ್ಧಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಇಂಥ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ.

ದೆಹಲಿಯ ಸುಖದೇವ್ ವಿಹಾರ್ ಮೇಲ್ಸೇತುವೆ ಬಳಿ ಇದ್ದ ವಲಸೆ ಕಾರ್ಮಿಕರನ್ನು ಶನಿವಾರ ರಾಹುಲ್ ಗಾಂಧಿ ಭೇಟಿಯಾದರು. ರಾಹುಲ್ ಗಾಂಧಿ ಬಿಳಿ ಕುರ್ತಾ, ಕಪ್ಪು ಪ್ಯಾಂಟ್ ಧರಿಸಿ ಫುಟ್​ಪಾಥ್ ಮೇಲೆ ಕೂತು ಕಾರ್ಮಿಕರ ಜೊತೆ ಸಂವಾದ ನಡೆಸಿದರು. ಅವರ ಕಷ್ಟಕೋಟಲೆಗಳನ್ನ ಆಲಿಸಿದರು.

ರಾಹುಲ್ ಗಾಂಧಿ ಜೊತೆ ಮಾತನಾಡಿದ್ದ ವಲಸೆ ಕಾರ್ಮಿಕರನ್ನು ಪೊಲೀಸರು ಮೇಲಿನವರ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ. ಆದರೆ, ಪೊಲೀಸರಿಂದ ಮಾಧ್ಯಮಗಳಿಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಇತ್ತೀಚೆಗೆ ಸಂಭವಿಸಿದ ರೈಲು ದುರಂತದಲ್ಲಿ 24 ವಲಸೆ ಕಾರ್ಮಿಕರು ದುರ್ಮರಣವಾದ ಘಟನೆ ಬಗ್ಗೆ ಪ್ರತಿಕ್ರಿಯಿಸುತ್ತಾ ರಾಹುಲ್ ಗಾಂಧಿ ಅವರು ಖಂಡನೆ ವ್ಯಕ್ತಪಡಿಸಿದ್ದರು. ವಲಸೆ ಕಾರ್ಮಿಕರನ್ನು ಅವರು ದೇಶದ ಆತ್ಮಗೌರವದ ಸಂಕೇತ ಎಂದು ಬಣ್ಣಿಸಿದ್ದರು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close