ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ರಚನಾತ್ಮಕ ಸುಧಾರಣೆಗಳಿಗೆ ಹೊಸ ಹೆಜ್ಜೆ – ನಿರ್ಮಲಾ ಸೀತಾರಾಮನ್

Posted By : Sirajuddin Bangar

Source: NS18

ಈಗಾಗಲೇ ಕೈಗಾರಿಕೆ, ಕೃಷಿ, ವಿದೇಶಿ ಬಂಡವಾಳ ಹೂಡಿಕೆ, ಮೀನುಗಾರಿಕೆ  ಮತ್ತು ಮತ್ತಿತರ ಕ್ಷೇತ್ರಗಳಿಗೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಏನೆಲ್ಲ ಸಹಾಯ, ಸವಲತ್ತುಗಳಿವೆ ಎಂದು ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ.

ದೇಶವನ್ನು ದುಸ್ಥಿತಿಗೆ ದೂಡಿರುವ ಕೊರೋನಾ ಮತ್ತು ಲಾಕ್‌ಡೌನ್ ಪರಿಸ್ಥಿತಿಗಳನ್ನು ನಿರ್ವಹಿಸಲೆಂದು ಘೋಷಿಸಲ್ಪಟ್ಟಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನ ಬಗ್ಗೆ ಕಳೆದ ಮೂರು ದಿನಗಳಿಂದ ಹಂತಹಂತವಾಗಿ ವಿವರಣೆ ನೀಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇಂದು ನಾಲ್ಕನೇ ಸುದ್ದಿಗೋಷ್ಠಿ ನಡೆಸಿ ಆರೋಗ್ಯ, ಸೇವಾ ವಲಯ, ಪ್ರವಾಸೋದ್ಯಮ, ವಿಮಾನಯಾನಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಪ್ಯಾಕೇಜ್ ವಿವರ ನೀಡಲಿದ್ದಾರೆ.

ಈಗಾಗಲೇ ಕೈಗಾರಿಕೆ, ಕೃಷಿ, ವಿದೇಶಿ ಬಂಡವಾಳ ಹೂಡಿಕೆ, ಮೀನುಗಾರಿಕೆ  ಮತ್ತು ಮತ್ತಿತರ ಕ್ಷೇತ್ರಗಳಿಗೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಏನೆಲ್ಲ ಸಹಾಯ, ಸವಲತ್ತುಗಳಿವೆ ಎಂದು ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದರು.

ಕೊರೋನಾ ವೈರಸ್ ಹುಟ್ಟಡಗಿಸಬೇಕೆಂದು ಒಂದಲ್ಲ, ಎರಡಲ್ಲ, ಮೂರು ಬಾರಿ‌ ಲಾಕ್ಡೌನ್ ಜಾರಿಗೊಳಿಸಲಾಯಿತು. ಆದರೆ ಕೊರೋನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಲೇ ಇದೆ. ಕೊರೋನಾ ನಿಯಂತ್ರಿಸಲು ಆರೋಗ್ಯ ಕ್ಷೇತ್ರವನ್ನು‌ ಸದೃಢ ಪಡಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಹಾಗಾಗಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಏನೇನು ಸವಲತ್ತು ಕೊಡಲಾಗುವುದು, ಕ್ಷೇತ್ರವನ್ನು ಸಮರ್ಥಗೊಳಿಸಲು ಯಾವ್ಯಾವ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಮಾಹಿತಿ ನೀಡಲಿದ್ದಾರೆ.

ಕೊರೊನಾ ಮತ್ತು ಲಾಕ್‌ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಮುಂದೆಯೂ ತೊಂದರೆ ಎದುರಿಸಲಿರುವ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಕ್ರಮ ಕೈಗೊಳ್ಳಬಹುದು. ಹೋಟೆಲ್, ರೆಸ್ಟೋರೆಂಟ್, ಹೋಂ ಸ್ಟೇ, ಲಾಡ್ಜ್, ಅತಿಥಿ ಗೃಹಗಳು, ಸಿನಿಮಾ ಮಂದಿರಗಳು ಮತ್ತಿತರ ವಿಷಯಗಳಿಗೆ ನೆರವು ನೀಡುವಂತಹ ಉಪ ಕ್ರಮಗಳನ್ನು ಇಂದಿನ‌ ತಮ್ಮ ಸುದ್ದಿಗೋಷ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ವಿವರಿಸುವ ಸಾಧ್ಯತೆ ಇದೆ ಎಂದು ಇವತ್ತು ಬೆಳಗ್ಗೆಯಿಂದಲೇ ಅಂದಾಜು ಇದೆ.

ದೇಶದ ಆರ್ಥಿಕತೆಗೆ ಇಂಬು ನೀಡುತ್ತಿರುವ ಮತ್ತೊಂದು ಪ್ರಮುಖ ಕ್ಷೇತ್ರವಾದ ಸೇವಾ ವಲಯವನ್ನು ಸದೃಢಗೊಳಿಸುವುದಕ್ಕೂ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಶಿಕ್ಷಣದಂತಹ ಕ್ಷೇತ್ರಗಳಿಗೆ ಮಹತ್ವದ ಪ್ರೋತ್ಸಾಹ ನೀಡಬಹುದು‌. ಒಟ್ಟಾರೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಇಂದು ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ಯಾಕೇಜ್ ಕುರಿತು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡುವುದು ಬಹುತೇಕ ಖಚಿತವಾಗಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close