ಕರ್ನಾಟಕ ಸುದ್ದಿ

ನಾಲ್ಕನೇ ಬಾರಿಗೆ ಮೇ 31ರವರೆಗೂ ಲಾಕ್​ಡೌನ್​​ ವಿಸ್ತರಣೆ ಸಾಧ್ಯತೆ: ಏನಿರಬಹುದು? ಯಾವುದಕ್ಕೆ ನಿರ್ಬಂಧ?

Posted By : Sirajuddin Bangar

Source : NS18

ಲಾಕ್​​ಡೌನ್ ನಿಯಮಗಳನ್ನು ಕಂಟೈನ್ಮೆಂಟ್ ಜೋನ್​​ಗಳಿಗೆ ಮಾತ್ರ ಸೀಮಿತಗೊಳಿಸಿ ಇದರಿಂದ ವಿನಾಯ್ತಿ ನೀಡುವ ಸಾಧ್ಯತೆ ಇದೆ. ಬಹುತೇಕ ರಾಜ್ಯಗಳು ವಿನಾಯ್ತಿ ಲಾಕ್ ಡೌನ್ ಮುಂದುವರಿಸಲು ಒಪ್ಪಿಗೆ ಸೂಚಿಸಿದ ಕಾರಣ ಹೀಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಮೇ 31ವರೆಗೂ ಲಾಕ್​​ಡೌನ್​​ ವಿಸ್ತರಿಸಿ ಹಲವು ಕ್ಷೇತ್ರಗಳಿಗೆ ವಿನಾಯ್ತಿ ನೀಡಲಾಗುತ್ತಿದೆ.

ಕೊರೋನಾ ಲಾಕ್​ಡೌನ್​​ ಮುಕ್ತಾಯವಾಗಲು ಇನ್ನೇನು ಒಂದೇ ದಿನ ಬಾಕಿ ಉಳಿದಿದೆ. ಕೇಂದ್ರ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಲಾಕ್​ಡೌನ್​​ ಜಾರಿಗೊಳಿಸಿದರೂ ದೇಶದಲ್ಲಿ ಕೊರೋನಾಗೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ವಿಸ್ತರಣೆ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆದ ಪ್ರಧಾನಿ ಮೋದಿ, ಕೇಂದ್ರ ಆರೋಗ್ಯ ಇಲಾಖೆಯ ಟಾಸ್ಕ್ ಫೋರ್ಸ್ ಮತ್ತು ನೀತಿ ಆಯೋಗದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಈಗ ಅದರಂತೆಯೇ ಕೇಂದ್ರ ಸರ್ಕಾರ ಮೇ 17ರಿಂದ ನಾಲ್ಕನೇ ಅವಧಿಗೆ ಮೇ 31ರವರೆಗೂ ಲಾಕ್​ಡೌನ್​​ ವಿಸ್ತರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಲಾಕ್​​ಡೌನ್ ನಿಯಮಗಳನ್ನು ಕಂಟೈನ್ಮೆಂಟ್ ಜೋನ್​​ಗಳಿಗೆ ಮಾತ್ರ ಸೀಮಿತಗೊಳಿಸಿ ಇದರಿಂದ ವಿನಾಯ್ತಿ ನೀಡುವ ಸಾಧ್ಯತೆ ಇದೆ. ಬಹುತೇಕ ರಾಜ್ಯಗಳು ವಿನಾಯ್ತಿ ಲಾಕ್ ಡೌನ್ ಮುಂದುವರಿಸಲು ಒಪ್ಪಿಗೆ ಸೂಚಿಸಿದ ಕಾರಣ ಹೀಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಮೇ 31ವರೆಗೂ ಲಾಕ್​​ಡೌನ್​​ ವಿಸ್ತರಿಸಿ ಹಲವು ಕ್ಷೇತ್ರಗಳಿಗೆ ವಿನಾಯ್ತಿ ನೀಡಲಾಗುತ್ತಿದೆ.

ಮೇ 17ರ ನಂತರ ಲಾಕ್‍ಡೌನ್​​ನಲ್ಲಿ  ಏನಿರಬಹುದು, ಯಾವುದಕ್ಕೆಲ್ಲ ನಿರ್ಬಂಧ?

 • ಕಾರ್ಖಾನೆ, ಕಚೇರಿ ತೆರೆಯಲು ಸಿಗಲಿದೆ ಅನುಮತಿ
 • ಅಂಗಡಿ ತೆರೆಯುವುದುಕ್ಕೂ ಇರುವುದಿಲ್ಲ ನಿರ್ಬಂಧ
 • ಎಲ್ಲೆಡೆ ಮದ್ಯ ಮಾರಾಟವೂ ಮುಕ್ತ ಮುಕ್ತ
 • ಸೆಲ್ಯೂನ್​​, ಜಿಮ್, ಪಾರ್ಲರ್ ಓಪನ್ ಮಾಡಲು ಒಪ್ಪಿಗೆ
 • ಅಂತರ ರಾಜ್ಯ ಸರಕು ಸಾಗಣೆಗೆ ಸಿಗಲಿದೆ ಒಪ್ಪಿಗೆ
 • ಹಸಿರು ವಲಯಕ್ಕಿಲ್ಲ ಯಾವುದೇ ನಿರ್ಬಂಧ
 • ಹಳದಿ ವಲಯಕ್ಕೆ ಕೆಲವೇ ಕೆಲವು ಮಿತಿಗಳು
 • ಕೆಂಪು ವಲಯದಲ್ಲಿ ಹದ್ದಿನಗಣ್ಣಿಟ್ಟು ಅವಕಾಶ
 • ಶಾಲಾ-ಕಾಲೇಜು, ಸಿನಿಮಾ ಥಿಯೇಟರ್ ಗಳು, ಮಾಲ್ ಗಳಿಗೆ ಇರುವುದಿಲ್ಲ ಗ್ರೀನ್ ಸಿಗ್ನಲ್
 • ಧಾರ್ಮಿಕ, ಸಾರ್ವಜನಿಕ ಕಾರ್ಯಕ್ರಮಗಳಿಗಿಲ್ಲ ಅನುಮತಿ
 • ಸಾರ್ವಜನಿಕ ಸಾರಿಗೆ ವ್ಯವಸ್ಥೆಗೂ ಸದ್ಯಕ್ಕಿಲ್ಲ ಒಪ್ಪಿಗೆ
 • ಕ್ರಮೇಣವಾಗಿ ಸಾರ್ವಜನಿಕ ಸಾರಿಗೆ ಸಂಚಾರ ಆರಂಭ
 • ರೈಲು, ವಿಮಾನಯಾನ ಕೂಡ ಹಂತಹಂತವಾಗಿ ಆರಂಭ
 • ಹೊಸ ಮಾರ್ಗಸೂಚಿಯಲ್ಲಿರಲಿವೆ ಹೊಸ ನಿಯಮಗಳು

ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಿದೆ ಎಂದು ನೋಡಬೇಕು. ಕೇಂದ್ರ ಗೃಹ ಇಲಾಖೆಯ ಹಸೊ ಮಾರ್ಗಸೂಚಿ ಬರುವತನಕ ಏನು ಹೇಳಲು ಸಾಧ್ಯವಿಲ್ಲ

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close