ಉದ್ಯೋಗ ಮಾಹಿತಿಕರ್ನಾಟಕ ಸುದ್ದಿದೇವದುರ್ಗಮಾನವಿರಾಯಚೂರು ಜಿಲ್ಲೆ ಸುದ್ದಿಸಿರವಾರ

ಸಿರವಾರ : ಶನಿವಾರ ಬೆಳಿಗ್ಗೆ 9 ಗಂಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

ವರದಿ : ಸಿರಾಜುದ್ದಿನ್ ಬಂಗಾರ್

ಸಿರವಾರ ಮೇ.15 : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ ವೈ ಎಫ್ ಐ) ಮತ್ತು ಭಾರತ ವಿದ್ಯಾರ್ಥಿ ಫೇಡರೇಷನ್ (ಎಸ್ ಎಫ್ ಐ) ತಾಲೂಕು ಸಮೀತಿಗಳ ವತಿಯಿಂದ ನಾಳೆ ಶನಿವಾರ ಬೆಳಿಗ್ಗೆ 9 ಗಂಟೆಗೆ ಸಿರವಾರ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ರಕ್ತದಾನ ಶಿಬಿರಗಳ ಮೂಲಕ ನಾಡಿನಲ್ಲಿ ಸಾಮರಸ್ಯದ ಸೇತುವೆ ನಿರ್ಮಿಸಲು ಸಹಕಾರಿಯಾಗುವ ರಕ್ತದಾನ ಮಹಾತ್ವವನ್ನು ಜನರಿಗೆ ತಿಳಿಪಡಿಸುವ ಹಾಗೂ ರಕ್ತದಾನಿಗಳನ್ನು ಉತ್ತೇಜಿಸುವ ಸಲುವಾಗಿ ಈ ಮಹಾತ್ವದ ಶಿಬಿರದಲ್ಲಿ ಭಾಗಿಯಾಗಿ ಕೊರೋನ ಮಹಮಾರಿ ರೋಗವನ್ನ ಮೆಟ್ಟಿ ನಿಲ್ಲಲು ರಕ್ತದ ಅವಶ್ಯಕತೆ ಇರುವದರಿಂದ ಸಿರವಾರ ತಾಲೂಕಿನ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರಕ್ತದಾನ ಶಿಬಿರದಲ್ಲಿ ಸೂಚಿಸಿದ ಸಮಯಕ್ಕೆ ರಕ್ತ ದಾನಿಗಳು ತಪ್ಪದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಮಾಸ್ಕುನ್ನು ಧರಿಸಿಕೊಂಡು ಬಂದು ರಕ್ತ ದಾನ ಮಾಡಬೇಕೆಂದು

ಡಿ.ವೈ.ಎಫ್.ಐ ಮತ್ತು ಎಸ್.ಎಫ್.ಐ ತಾಲೂಕು ಸಮಿತಿಯ ಚಂದ್ರಶೇಖರ,ಚಿದಾನಂದ,ಪ್ರವೀಣಕುಮಾರ,ದೇವೆಗೌಡ,ಪಾರ್ಥ ಯಾದವ,ಶಿವಕುಮಾರ್, ಮಹಮ್ಮದ ರಫೀ ಮನವಿ ಮಾಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close