Uncategorized

ಲಾಕ್​​ಡೌನ್ ಸಂದರ್ಭದಲ್ಲಿ ಆಟೋ ಮೊಬೈಲ್ ಬಿಡಿ ಭಾಗ ತಯಾರಿಸುವ ಕಾರ್ಖಾನೆಗೆ ಬೀಗ; ನೂರಾರು ಕಾರ್ಮಿಕರು ಅತಂತ್ರ!

ವರದಿ : ಸಿರಾಜುದ್ದಿನ್ ಬಂಗಾರ್

ಬೆಳಗಾವಿ ತಾಲೂಕಿನ ಕಾಕತಿ ಕೈಗಾರಿಕೆ ಪ್ರದೇಶದಲ್ಲಿ ಇರೋ ಬಾಲು ಇಂಡಿಯಾ ಕಾರ್ಖಾನೆ ಮೇ 11ರಿಂದ ಮುಚ್ಚಿದೆ. ಆಟೋ ಮೊಬೈಲ್ ಬಿಡಿ ಭಾಗವನ್ನು ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ 200ಕ್ಕೂ ಹೆಚ್ಚು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ನಡೆಯುತ್ತಿದ್ದ ಕಾರ್ಖಾನೆ ಆರ್ಥಿಕ ಮುಗ್ಗಟಿನಿಂದ ಮುಚ್ಚಿದ್ದು ಕಾರ್ಮಿಕರು ಅತಂತ್ರರಾಗಿದ್ದಾರೆ.

ಬೆಳಗಾವಿ(ಮಾ:15): ಕೊರೊನಾ ವೈರಸ್ ಮಹಾಮಾರಿ ದೇಶವನ್ನು ಕಾಡುತ್ತಿದೆ. ವೈರಸ್ ಹರಡುವುದನ್ನು ತಪ್ಪಿಸಲು ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕಳೆದ 54 ದಿನದಲ್ಲಿ ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ. ಇದನ್ನು ತಪ್ಪಿಸಲು ಯಾವುದೇ ಕಾರ್ಖಾನೆಗಳು ಕಾರ್ಮಿಕರು ಕೆಲಸದಿಂದ ತೆಗೆಯಬಾರದು ಎಂದು ಪ್ರಧಾನಿ ನರೇಂದ್ರ ಮೊದಿ ಸಹ ಮನವಿ ಮಾಡಿದ್ದಾರೆ.ಇಂತಹ ಕಠಿಣ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಆಟೋ ಮೊಬೈಲ್ ಬೀಡಿ ಭಾಗ ತಯಾರಿಸುತ್ತಿದ್ದ ಕಾರ್ಖಾನೆಯೊಂದು ಮುಚ್ಚಿದೆ. ಕಾರ್ಖಾನೆಯನ್ನು ನಂಬಿ ಜೀವನ ನಡೆಸುತ್ತಿದ್ದ ನೂರಾರು ಕಾರ್ಮಿಕರು ಇದೀಗ ಬೀದಿಗೆ ಬಂದಿರುವ ಸ್ಥಿನಿ ನಿರ್ಮಾಣವಾಗಿದೆ.

ಏಕಾಏಕಿ ಕಾರ್ಖಾನೆ ಮುಚ್ಚಿದ್ದರಿಂದ ಅನೇಕ ಕಾರ್ಮಿಕರು ಅತಂತ್ರರಾಗಿದ್ದು, ಸದ್ಯ ಯಾವುದೇ ಕಾರ್ಖಾನೆಗಳು ಕಾರ್ಮಿಕರು ಸೇರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ಬಾಲು ಇಂಡಿಯಾ ಕಾರ್ಖಾನೆ ತನ್ನ ಕಾರ್ಮಿಕರನ್ನು ಕೈ ಬಿಟ್ಟಿದೆ.

ಬೆಳಗಾವಿ ತಾಲೂಕಿನ ಕಾಕತಿ ಕೈಗಾರಿಕೆ ಪ್ರದೇಶದಲ್ಲಿ ಇರೋ ಬಾಲು ಇಂಡಿಯಾ ಕಾರ್ಖಾನೆ ಮೇ 11ರಿಂದ ಮುಚ್ಚಿದೆ. ಆಟೋ ಮೊಬೈಲ್ ಬಿಡಿ ಭಾಗವನ್ನು ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ 200ಕ್ಕೂ ಹೆಚ್ಚು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ನಡೆಯುತ್ತಿದ್ದ ಕಾರ್ಖಾನೆ ಆರ್ಥಿಕ ಮುಗ್ಗಟಿನಿಂದ ಮುಚ್ಚಿದ್ದು ಕಾರ್ಮಿಕರು ಅತಂತ್ರರಾಗಿದ್ದಾರೆ

.

ಕಾರ್ಖಾನೆ ಕಾಕತಿ ಕೈಗಾರಿಕಾ ಪ್ರದೇಶದಲ್ಲಿ ಎರಡು ಯುನಿಟ್ ಹೊಂದಿತ್ತು. ಎರಡರಲ್ಲಿ 200ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಕಾರ್ಖಾನೆ ನೀಡಿರುವ ಶಾಕ್​ನಿಂದಾಗಿ ಕಾರ್ಮಿಕರ ಬದುಕು ಬೀದಿಪಾಲಾಗಿದೆ. ಬೇರೆ ಕಡೆಯಲ್ಲಿ ಕೆಲಸ ಸಿಗುವ ನಿರೀಕ್ಷೆಗಳು ಸಹ ಸದ್ಯ ಇಲ್ಲ. ಹೀಗಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಾರ್ಮಿಕರು ಧರಣಿ ನಡೆಸಿದ್ದರು.

ಮುಂಬೈ ಮೂಲದ ಉದ್ಯಮಿ ಜಸ್ಪಾಲ್ ಸಿಂಗ್ ಚಂದೋಕ್ ಬಾಲು ಇಂಡಿಯಾ ಕಾರ್ಖಾನೆಯ ಮಾಲೀಕರಾಗಿದ್ದಾರೆ. ಕಾರ್ಮಿಕರಿಗೆ ಮಾಹಿತಿ ನೀಡದೆ ಏಕಾಏಕಿಯಾಗಿ ಕಾರ್ಖಾನೆಯನ್ನು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕಳೆದ 2 ತಿಂಗಳ ವೇತನವನ್ನು ಸಹ ಬಾಕಿ ಉಳಿಸಿಕೊಂಡಿದ್ದಾರೆ. ಕಾರ್ಖಾನೆಯ ವಿರುದ್ಧ ಇದೀಗ ಕಾರ್ಮಿಕರು ಕಾರ್ಮಿಕ ಇಲಾಖೆಗೆ ದೂರು ಸಹ ನೀಡಿದ್ದಾರೆ.

ಈ ಬಗ್ಗೆ ಬೆಳಗಾವಿಯ ಸಹಾಯಕ ಕಾರ್ಮಿಕರ ಆಯುಕ್ತ ನಾಗೇಶ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆದರೇ ಈ ಸಭೆಗೆ ಕಾರ್ಖಾನೆಯ ಮಾಲೀಕರು ಗೈರು ಹಾಜರಿ ಆಗಿದ್ದಾರೆ. ಇದೇ ತಿಂಗಳ 19ರಂದು ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಕಾರ್ಖಾನೆಯ ಮಾಲೀಕರಿಗೆ ಸಭೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ದೇಶದಲ್ಲಿ ಕಾರ್ಮಿಕರು, ಬಡವರು ಹಾಗೂ ಮದ್ಯಮ ವರ್ಗದ ಜನರು ಲಾಕ್ ಡೌನ್ ನಿಂದ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಜತೆಗೆ ಕಾರ್ಮಿರಕ ಹಿತದೃಷ್ಠಿಯಿಂದ ಅನೇಕ ಪ್ಯಾಕೆಜ್ ಘೋಷಣೆ ಮಾಡಿದ್ದಾರೆ. ಇದನ್ನು ಪಾಲಿಕಸಬೇಕಿದ್ದ ಮಾಲೀಕರು ಮಾತ್ರ ಕಾರ್ಮಿಕರನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ

Continue

Related Articles

Leave a Reply

Your email address will not be published. Required fields are marked *

Back to top button
Close
Close