ಕರ್ನಾಟಕ ಸುದ್ದಿ

ಲಾಕ್​ಡೌನ್ ಸಂಕಷ್ಟದ ಮಧ್ಯೆ ಸಾಲ ವಸೂಲಾತಿಗೆ ಜನರ ಬೆನ್ನುಬಿದ್ದ ಖಾಸಗಿ ಫೈನಾನ್ಸ್ ಕಂಪನಿಗಳು

Posted By : Sirajuddin Bangar

Sorce : NS18

ಮಹಿಳಾ ಸಂಘದ ಅಧ್ಯಕ್ಷರಿಗೆ ಸಾಲ ನೀಡುವುದಾಗಿ ಆಮಿಷವೊಡ್ಡಿ, ಉಳಿದ ಮಹಿಳಾ ಸದಸ್ಯರಿಂದ ಸಾಲ ವಸೂಲಿ ಮಾಡುವಂತೆ ಕಿರುಕುಳ ನೀಡಿದ್ದಾರೆ.

ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್ ಡೌನ್ ಆಗಿದೆ. ಇದರಿಂದಾಗಿ ಬಡವರು, ರೈತರು ಮಧ್ಯಮ ವರ್ಗದ ಜನರು ಸೇರಿದಂತೆ ಎಲ್ಲಾ ಜನರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರಗಳು ಜನರು ಯಾವುದೇ ಸಾಲ ಮರುಪಾವತಿಯನ್ನು ಇನ್ನೂ ಮೂರು ತಿಂಗಳು ಮಾಡಬೇಕಾದ ಅಗತ್ಯವಿಲ್ಲ ಎಂದಿದೆ. ಆದರೂ ಲಾಕ್ ಡೌನ್ ನಡುವೆಯೂ ಕೆಲವು ಫೈನಾನ್ಸ್ ಕಂಪೆನಿಗಳು ಜನರಿಗೆ ಸಾಲಮರುಪಾವತಿ ಮಾಡುವಂತೆ ಒತ್ತಡ ಏರುತ್ತಿವೆ.

ಮನೆ ಮನೆಗಳಿಗೆ ಹೋಗಿ ಸಾಲದ ಹಣ ಪಾವತಿ ಮಾಡುವಂತೆ ಕಿರುಕುಳ ನೀಡುತ್ತಿವೆ. ಇಂತಹ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಬಳ್ಳಾರಳ್ಳಿಯಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಎಸ್​ಕೆಎಸ್ ಫೈನಾನ್ಸ್ ಕಂಪೆನಿಯಿಂದ ಸಾಲ ಪಡೆದಿದ್ದಾರೆ. ಆದರೆ ಈ ಸಾಲದ ಹಣವನ್ನು ಮರುಪಾವತಿಸುವಂತೆ ಬೆಳಿಗ್ಗೆ ಗ್ರಾಮಕ್ಕೆ ಹೋಗಿ ಮಹಿಳೆಯರನ್ನು ಒಂದೆಡೆ ಸೇರಿಸಿ ಒತ್ತಾಯಿಸಿದ್ದಾರೆ. ಅದರಲ್ಲೂ ಸಂಘದ ಅಧ್ಯಕ್ಷರಿಗೆ ಪುನಃ ಸಾಲ ನೀಡುವುದಾಗಿ ಆಮಿಷವೊಡ್ಡಿ, ಉಳಿದ ಮಹಿಳಾ ಸದಸ್ಯರಿಂದ ಸಾಲ ವಸೂಲಿ ಮಾಡುವಂತೆ ಕಿರುಕುಳ ನೀಡಿದ್ದಾರೆ.

ಇದನ್ನು ವಿಷಯ ಗೊತ್ತಾದ ಕೂಡಲೇ ಕರ್ನಾಟಕ ರಕ್ಷಣ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಪ್ರಾನ್ಸಿಸ್ ಡಿಸೋಜಾ ಮತ್ತು ಕಾರ್ಯಕರ್ತರು ಸ್ಥಳಕ್ಕೆ ಹೋಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಂತೆ ಫೈನಾನ್ಸ್ ಕಂಪೆನಿ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close