Uncategorizedಅಂತರಾಷ್ಟ್ರೀಯ

ರಸ್ತೆ ಅಪಘಾತದಲ್ಲಿ ಯುವ ನಿರ್ದೇಶಕ ದುರ್ಮರಣ; ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಇಹಲೋಹ ತ್ಯಜಿಸಿದ ಅರುಣ್​ ಪ್ರಸತ್

ವರದಿ : ಸಿರಾಜುದ್ದಿನ್ ಬಂಗಾರ್

Arun Prasath: ಅರುಣ್​​ ಪ್ರಸತ್ ‘4G‘ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ‘4G‘ ಅವರ ಮೊದಲ ಸಿನಿಮಾವಾಗಿದ್ದು ಟಾಲಿವುಡ್​ಗೆ ಯುವ ನಿರ್ದೇಶಕನಾಗಿ ಪಾದಾರ್ಪಣೆ ಮಾಡಬೇಕಾಗಿತ್ತು. ಆದರೀಗ ಅರುಣ್​ ರಸ್ತೆ ಅಪಘಾತದಿಂದ ದುರ್ಮರಣ ಹೊಂದಿದ್ದಾರೆ. ಟಾಲಿವುಡ್​​ನ ಅನೇಕ ನಿರ್ದೇಶಕರು ಮತ್ತು ನಟ-ನಟಿಯರು ಯುವ ನಿರ್ದೇಶಕ ಅರುಣ್​ ಸಾವಿಗೆ ಕಂಬನಿ ಮಿಡಿದ್ದಾರೆ.

ತಮಿಳಿನ ಯುವ ನಿರ್ದೇಶಕ ಎ.ವಿ ಅರುಣ್​​​ ಪ್ರಸತ್​​ ಅವರು ಶುಕ್ರವಾರದಂದು ನಡೆದ ರಸ್ತೆ ಅಪಘಾತದಲ್ಲಿ ದರ್ಮರಣ ಹೊಂದಿದ್ದಾರೆ. ಕೊಯಮತ್ತೂರಿನ ಮೆಟ್ಟುಪಾಳಂ ಬಳಿ ತಮ್ಮ ಬೈಕ್​​ನಲ್ಲಿ ತೆರಳುತ್ತಿದ್ದ ವೇಳೆ ಎದುರು ಬರುತ್ತಿರುವ ಲಾರಿಗೆ ಡಿಕ್ಕಿ ಹೊಡೆದಿದ್ದ ಅರುಣ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಅರುಣ್​​ ಪ್ರಸತ್ ‘4G‘ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ‘4G‘ ಅವರ ಮೊದಲ ಸಿನಿಮಾವಾಗಿದ್ದು ಟಾಲಿವುಡ್​ಗೆ ಯುವ ನಿರ್ದೇಶಕನಾಗಿ ಪಾದಾರ್ಪಣೆ ಮಾಡಬೇಕಾಗಿತ್ತು. ಆದರೀಗ ಅರುಣ್​ ರಸ್ತೆ ಅಪಘಾತದಿಂದ ದುರ್ಮರಣ ಹೊಂದಿದ್ದಾರೆ. ಟಾಲಿವುಡ್​​ನ ಅನೇಕ ನಿರ್ದೇಶಕರು ಮತ್ತು ನಟ-ನಟಿಯರು ಯುವ ನಿರ್ದೇಶಕ ಅರುಣ್​ ಸಾವಿಗೆ ಕಂಬನಿ ಮಿಡಿದ್ದಾರೆ.

2016ರಲ್ಲಿ ಅರುಣ್​ ‘4G‘ ಸಿನಿಮಾವನ್ನು ಮಾಡಲು ಮುಂದಾದರು. ಈ ಸಿನಿಮಾದಲ್ಲಿ ಜಿನಿ ಪ್ರಕಾಶ್​​ ಮತ್ತು ಗಾಯತ್ರಿ ಸುರೇಶ್​ ಅವರು ನಟಿಸಿದ್ದರು. ಆದರೆ ಕಾರಣಾಂತರಗಳಿಂದಾಗಿ ಸಿನಿಮಾ ಬಿಗಡೆಯಾಗಿರಲಿಲ್ಲ. ಯುವ ನಿರ್ದೇಶಕ ಅರುಣ್​ ಅವರನ್ನು ಕಳೆದುಕೊಂಡಿದ್ದಕ್ಕೆ ಸಂಗೀತ ನಿರ್ದೇಶಕ ಶಂಕರ್​ ಟ್ವೀಟ್​ ಮಾಡಿದ್ದಾರೆ

Continue

Related Articles

Leave a Reply

Your email address will not be published. Required fields are marked *

Back to top button
Close
Close