ಕರ್ನಾಟಕ ಸುದ್ದಿ

ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ನಿಧನ

ವರದಿ : ಸಿರಾಜುದ್ದೀನ್ ಬಂಗಾರ

ಬೆಂಗಳೂರು: ನನ್ನ ಟಿಕೆಟ್ ಕನ್​ಫರ್ಮ್ ಆಗಿದೆ. ನನಗೆ ಕ್ಯಾನ್ಸರ್ ಇರುವುದು ನಿಜ. ಮಿರಾಕಲ್ ನಡೆಯುತ್ತಿರುವುದು ನನ್ನ ವಿಲ್​ ಪವರ್​ನಿಂದ. ಆದರೆ, ನನ್ನ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದ್ದು, ಓಕೆ ಆದ ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ ಎಂದು ಹೇಳಿದ್ದ ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ಕೊನೆಗೂ ತಮ್ಮ ಜೀವನಯಾನ ಮುಗಿಸಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಇಂದು ನಿಧನರಾಗಿದ್ದಾರೆ.

ಪುತ್ತೂರಿನಲ್ಲಿ ನೆಟ್ಟಾಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಗೆ ಜನಿಸಿದ ಬಂಟ ಸಮುದಾಯದ ಮುತ್ತಪ್ಪ ರೈ ಮನೆ ಮಾತು ತುಳು. ರೇಖಾ ಅವರನ್ನು ಮದುವೆಯಾದ ಮುತ್ತಪ್ಪ ರೈ ಅವರಿಗೆ ರಾಕಿ ಮತ್ತು ರಿಕ್ಕಿ ಎಂಬ ಇಬ್ಬರು ಮಕ್ಕಳಿದ್ದಾರೆ. 2013ರಲ್ಲಿ ಇವರ ಪತ್ನಿ ರೇಖಾ ಅವರು ಅನಾರೋಗ್ಯದಿಂದ ಸಿಂಗಾಪುರದ ಎಲಿಜಬೆತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇದೀಗ ಕ್ಯಾನ್ಸರ್​ನಿಂದಾಗಿ ಮುತ್ತಪ್ಪ ರೈ ಅವರು ಇಹಲೋಕ ತ್ಯಜಿಸಿದ್ದಾರೆ.

ಅವರ ಮೃತದೇಹವನ್ನು ಈಗ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಿಂದ ಬಿಡದಿಯ ಮನೆಗೆ ಸಾಗಿಸಲಾಗುತ್ತಿದೆ

Continue

Related Articles

Leave a Reply

Your email address will not be published. Required fields are marked *

Back to top button
Close
Close