ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಹಾಸನದಲ್ಲಿ ಒಂದೇ ದಿನ 7 ಕೊರೋನಾ ಪ್ರಕರಣ; ಜಿಲ್ಲೆಯಲ್ಲಿ 16ಕ್ಕೆ ಏರಿದ ಸೋಂಕಿತರ ಸಂಖ್ಯೆ

Posted By : Sirjuddin Bangar

Source: NS18

ಚನ್ನರಾಯಪಟ್ಟಣದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಈ ತಾಲೂಕಿನಲ್ಲಿ ಲಾಕ್‌ಡೌನ್ ನಿಯಮಗಳನ್ನು ಕಠಿಣವಾಗಿ ‌ಜಾರಿಗೆ ತರುವಂತೆ ಮನವಿ ಎಂಎಲ್​ಸಿ ಗೋಪಾಲಸ್ವಾಮಿ ಅವರು ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು.

ಹಾಸನ: ಹಾಸನ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ ಕಂಡು ಬಂದಿರುವುದಾಗಿ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ. ಇದರೊಂದಿಗೆ ಹಸಿರು ವಲಯದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕು ಪತ್ತೆಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ. ಮಾಧುಸ್ವಾಮಿ ಅವರು ನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಂದು ಮಧ್ಯಾಹ್ನದವರೆಗೂ ಮೂರು ಕೊರೋನಾ ಪ್ರಕರಣಗಳು ವರದಿಯಾಗಿದ್ದವು. ಮಧ್ಯಾಹ್ನದ ಬಳಿಕ ಬಂದ ವರದಿಯಲ್ಲಿ ಮತ್ತೆ ನಾಲ್ವರಲ್ಲಿ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ. ಹೊಳೆನರಸೀಪುರದಲ್ಲಿ 2, ಅರಕಲಗೂಡಿನಲ್ಲಿ 1, ಚನ್ನರಾಯಪಟ್ಟಣ-ಒಬ್ಬರಿಗೆ ಇಂದು ಕೊರೋನಾ ಪಾಸಿಟಿವ್ ಬಂದಿದೆ. ಮೇ 12ರಂದು 5, ಮೇ 13 ರಂದು 4 ಪ್ರಕರಣಗಳು ವರದಿಯಾಗಿದ್ದವು. ನಿನ್ನೆವರೆಗೆ ಒಟ್ಟು 9 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇಂದು ಒಟ್ಟು 7 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈವರೆಗೂ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ 12 ಪ್ರಕರಣಗಳು ಚನ್ನರಾಯಪಟ್ಟಣ, 2 ಹೊಳೆನರಸೀಪುರ ಹಾಗೂ ಅರಕಲಗೂಡಿನಲ್ಲಿ 2 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 16 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಲಾಕ್​ಡೌನ್ ಕಠಿಣ ನಿಯಮ ಜಾರಿಗೆ ಮನವಿ

ಚನ್ನರಾಯಪಟ್ಟಣದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಈ ತಾಲೂಕಿನಲ್ಲಿ ಲಾಕ್‌ಡೌನ್ ನಿಯಮಗಳನ್ನು ಕಠಿಣವಾಗಿ ‌ಜಾರಿಗೆ ತರುವಂತೆ ಮನವಿ ಎಂಎಲ್​ಸಿ ಗೋಪಾಲಸ್ವಾಮಿ ಅವರು ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close