ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ನಿರ್ಮಲಾ ಸೀತಾರಾಮನ್ 3ನೇ ಸುದ್ದಿಗೋಷ್ಠಿ- ಇಂದು ಯಾವ್ಯಾವ ಕ್ಷೇತ್ರಕ್ಕೆ ಏನೇನು ನೀಡಲಿದ್ದಾರೆ?

Posted By : Sirjuddin Bangar

Source: NS18

ವಿಮಾನಯಾನ ಸಂಸ್ಥೆಗಳಿಗೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಕೆಲವು ನೆರವುಗಳನ್ನು ನೀಡುವ ಘೋಷಣೆ ಮಾಡುವ ಸಾಧ್ಯತೆ ಇದೆ.

ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ದೇಶದಲ್ಲಿ ಕಂಡು ಕೇಳರಿಯದ ಕಡು ಕಷ್ಟವನ್ನು ಸೃಷ್ಟಿಸಿದ್ದು, ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರ ಸರ್ಕಾರದ ವತಿಯಿಂದ ಪ್ರಕಟಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿಗೆ ಹಂತಹಂತವಾಗಿ ನಿನ್ನೆ ಮತ್ತು ಮೊನ್ನೆ ವಿವರಣೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇಂದು ಇನ್ನೊಂದು ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ವಿವರಣೆ ನೀಡಲಿದ್ದಾರೆ.

ಇಂದು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವಿಮಾನಯಾನ, ವಿದೇಶಿ ಹೂಡಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಏನೇನು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸುತ್ತಾರೆ‌. ಅಲ್ಲದೆ ನಿನ್ನೆ ಪ್ರಸ್ತಾಪಿಸಿದ್ದ ಕೃಷಿ ಕ್ಷೇತ್ರಕ್ಕೆ ಇವತ್ತು ಮತ್ತೂ‌ ಕೆಲವು ನೆರವುಗಳನ್ನು ಘೋಷಿಸುತ್ತಾರೆ ಎಂದು‌ ಹೇಳಲಾಗುತ್ತಿದೆ.

ಈಗಾಗಲೇ ಲಾಕ್​ಡೌನ್​​ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕಳೆದ 50 ದಿನಗಳಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.‌ ಮೊದಲೇ ಸಂಕಷ್ಟ ಎದುರಿಸುತ್ತಿದ್ದ ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಲವಾರು ವಿಮಾನಯಾನ ಕಂಪನಿಗಳು ನೌಕರರನ್ನು ತೆಗದುಹಾಕಿವೆ. ಕೆಲವು ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ಸಂಬಳ ಕಡಿತ ಮಾಡಿವೆ. ಆದುದರಿಂದ ವಿಮಾನಯಾನ ಸಂಸ್ಥೆಗಳಿಗೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಕೆಲವು ನೆರವುಗಳನ್ನು ನೀಡುವ ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಮಾನಯಾನ ಸಂಸ್ಥೆಗಳು ಮುಂದೆ ಕರ್ತವ್ಯ ನಿರ್ವಹಿಸುವುದಕ್ಕೂ ಹಲವು ತೊಡಕುಗಳಿವೆ. ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮ ಇರಲಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಆದಷ್ಟು ದರ ಹೆಚ್ಚು ಮಾಡಬೇಕಾಗುತ್ತದೆ. ದರ ಹೆಚ್ಚಾದರೆ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಇಂಥ ಸಂದಿಗ್ಧ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಲ ನಿಯಮಗಳು ಸಡಿಲಿಸುವ ಸಾಧ್ಯತೆ ಇದೆ. ವಿಮಾನಯಾನ ಉದ್ಯಮ ಪುನಾರಂಭ ಆಗಲು ಅನುವಾಗುವಂತೆ ಆರ್ಥಿಕ ಸಹಾಯ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿದೇಶಿ ಬಂಡವಾಳ ಹೂಡಿಕೆಗೆ ಒತ್ತು:

ಕೊರೋನಾ ಹುಟ್ಟಿದ್ದು ಚೀನಾದಲ್ಲಿ, ಹರಡಿದ್ದು ಚೀನಾದಿಂದಲೇ ಎಂಬುದು ಈಗ ಬಹಿರಂಗಗೊಂಡಿರುವ ಸತ್ಯ. ಅದೇ ಕಾರಣಕ್ಕೆ ಚೀನಾದಲ್ಲಿ ಬಂಡವಾಳ ಹೂಡಿದ್ದ, ಉದ್ಯಮ ಸೃಷ್ಟಿಸಿದ್ದ ಜಗತ್ತಿನ ಹಲವು ದೊಡ್ಡ ದೊಡ್ಡ ಕಂಪನಿಗಳು ಚೀನಾದಿಂದ ಕಾಲ್ಕಿಳುತ್ತಿವೆ. ಚೀನಾದಿಂದ ಹೊರನಡೆಯುತ್ತಿರುವ ವಿದೇಶಿ ಕಂಪನಿಗಳನ್ನು ಭಾರತದತ್ತ ಸೆಳೆಯಲು 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

ಚೀನಾ ರೀತಿಯಲ್ಲೇ ಭಾರತದಲ್ಲೂ ಅಪಾರ ಪ್ರಮಾಣದ ಮಾನವ ಸಂಪನ್ಮೂಲ ಇರುವುದರಿಂದ, ಕಡಿಮೆ ಹಣಕ್ಕೆ ದುಡಿಯುವ ಯೂರೋಪ್ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತದ ಕಾರ್ಮಿಕರ ಕೌಶಲ್ಯ ಹೆಚ್ಚು. ಹಾಗಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಆದ್ಯತೆ ನೀಡಿ ಬಂಡವಾಳ ಆಕರ್ಷಿಸಿದರೆ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಹಣ ಬರುತ್ತದೆ.‌ ಮಾರುಕಟ್ಟೆ ಬೆಳೆಯುತ್ತದೆ ಎಂಬ ಕಾರಣಕ್ಕೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.ಅಲ್ಲದೆ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ನೆರವು ನೀಡುವ ಸಾಧ್ಯತೆ ಇದೆ. ಈ ಮೂಲಕ ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿಗೆ ಹಂತಹಂತವಾಗಿ ನಿನ್ನೆ ಮತ್ತು ಮೊನ್ನೆ ವಿವರಣೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರದು ಪ್ಯಾಕೇಜ್ ಬಗ್ಗೆ ಇಂದೇ ಕಡೆಯ ಸುದ್ದಿಗೋಷ್ಠಿ ಆಗುವ ಸಾಧ್ಯತೆ ಕೂಡ ಇದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close