ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ಆರ್ಥಿಕ ಪ್ಯಾಕೇಜ್ 3ನೇ ಹಂಚಿಕೆ; ರೈತರು, ಮೀನುಗಾರರು, ಹೈನುಗಾರರಿಗೆ ಆದ್ಯತೆ; ನಿರ್ಮಲಾ ಸೀತಾರಾಮನ್ ಕೊರೋನಾ ಪರಿಸ್ಥಿತಿ ನಿರ್ವಹ

Posted By : Sirjuddin Bangar

Source: NS18

ಕೊರೋನಾ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಹಂಚಿಕೆಯ ಬಗ್ಗೆ ಹಂತಹಂತವಾಗಿ ನಿನ್ನೆ ಮತ್ತು ಮೊನ್ನೆ ವಿವರಣೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇಂದು ಇನ್ನೊಂದು ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ವಿವರಣೆ ನೀಡಿದರು.

 ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ದೇಶದಲ್ಲಿ ಕಂಡು ಕೇಳರಿಯದ ಕಡು ಕಷ್ಟವನ್ನು ಸೃಷ್ಟಿಸಿದ್ದು, ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ವಿಶೇಷ ಪ್ಯಾಕೇಜ್ ಹಂಚಿಕೆಯ ಬಗ್ಗೆ ಹಂತಹಂತವಾಗಿ ನಿನ್ನೆ ಮತ್ತು ಮೊನ್ನೆ ವಿವರಣೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಇಂದು ಇನ್ನೊಂದು ಸುದ್ದಿಗೋಷ್ಠಿ ನಡೆಸಿ ಮತ್ತಷ್ಟು ವಿವರಣೆ ನೀಡಿದರು.

ಸಂಜೆ ನಾಲ್ಕು ಗಂಟೆಗೆ ಸುದ್ದಿಗೋಷ್ಠಿ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿಶೇಷ ಆರ್ಥಿಕ ಪ್ಯಾಕೇಜ್​ನಲ್ಲಿ ಇಂದು ದೇಶದ ಅತಿದೊಡ್ಡ ವಲಯವಾದ ಕೃಷಿ ವಲಯದ ರೈತರು ಹಾಗೂ ಮೀನುಗಾರರು, ಹೈನುಗಾರರಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close