ಕರ್ನಾಟಕ ಸುದ್ದಿ

ಬಿಗ್ ಬ್ರೇಕಿಂಗ್ : ಕರ್ನಾಟಕದಲ್ಲಿ ಸಾವಿರ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ, ಇಂದು 45 ಮಂದಿಗೆ ಪಾಸಿಟಿವ್.!

Posted By : Sirajuddin Bangar

Source : DH

ಬೆಂಗಳೂರು,ಮೇ 15- ರಾಜ್ಯದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದೆ. ಇಂದು ಹೊಸದಾಗಿ 45 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ.

ಕಳೆದ 47 ದಿನಗಳಿಂದ ಸೋಂಕು ಮುಕ್ತವಾಗಿದ್ದ ಉಡುಪಿಯಲ್ಲಿ ಮತ್ತೆ ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದುಬೈನಿಂದ ಹಿಂತಿರುಗಿದ 20 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಆತಂಕ ಮತ್ತಷ್ಟು ಹೆಚ್ಚಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 13, ದಕ್ಷಿಣ ಕನ್ನಡ 16, ಉಡುಪಿ 5, ಹಾಸನ 3, ಬೀದರ್ 3, ಚಿತ್ರದುರ್ಗ 2, ಕೋಲಾರ, ಬಾಗಲಕೋಟೆ, ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣಗಳು ಸೇರಿದಂತೆ 45 ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದ್ದು, 476 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 520 ಮಂದಿ ಸೋಂಕಿನಿಂದ ಬಳಲುತ್ತಿದ್ದು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀದರ್‍ನಲ್ಲಿ 14 ವರ್ಷದ ಬಾಲಕಿ ಹಾಗೂ 40 ವರ್ಷದ ಮಹಿಳೆಗೆ ರೋಗಿ ನಂ. 911 ಮತ್ತು 996ರಿಂದ ರೋಗ ಅಂಟಿದೆ. ಕೋಲಾರದಲ್ಲಿ ರೋಗ ತಗುಲಿರುವ 24 ವರ್ಷ ಮತ್ತು 30 ವರ್ಷದ ವ್ಯಕ್ತಿಗಳಿಬ್ಬರು 3 ವರ್ಷದ ಮಗುವಿಗೆ ಚೆನ್ನೈ ಮತ್ತು ತಮಿಳು ನಾಡಿಗೆ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ರೋಗ ತಗುಲಿರುವುದು ಗೊತ್ತಾಗಿದೆ.

ಶಿವಮೊಗ್ಗದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದು 42 ವರ್ಷದ ವ್ಯಕ್ತಿ ಮುಂಬೈನಿಂದ ಹಿಂತಿರುಗಿದ್ದ ಹಿನ್ನೆಲೆಯಲ್ಲಿ ಸೋಂಕು ಕಂಡು ಬಂದಿದೆ. ಹಾಸನದಲ್ಲಿ 24 ವರ್ಷದ ಮಹಿಳೆ 33 ವರ್ಷದ ಪುರುಷ ಹಾಗೂ 7 ವರ್ಷದ ಬಾಲಕ ಈ ಮೂವರು ಮುಂಬೈನಿಂದ ಬಂದಿದ್ದು ಇವರಿಗೆ ಕೊರೋನಾ ಸೋಂಕು ತಗುಲಿದೆ. ಬೀದರ್‍ನ 34 ವರ್ಷದ ವ್ಯಕ್ತಿ ಕಂಟೈನ್ಮೆಂಟ್ ಝೋನ್‍ನ ಸಂಪರ್ಕ ಹೊಂದಿದ ಪರಿಣಾಮ ರೋಗ ಅಂಟಿಕೊಂಡಿದೆ.

ಬಾಗಲಕೋಟೆಯಲ್ಲಿ 21 ವರ್ಷದ ಮಹಿಳೆಗೆ ರೋಗಿ ನಂ. 865ರ ದ್ವಿತೀಯ ಸಂಪರ್ಕದಿಂದ ರೋಗ ತಗುಲಿದೆ. ದಕ್ಷಿಣ ಕನ್ನಡದ 16 ಜನರ ಪೈಕಿ ನಾಲ್ವರು ಮಹಿಳೆಯರು, 11 ಜನ ಪುರುಷರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಎಲ್ಲರೂ ದುಬೈನಿಂದ ಹಿಂತಿರುಗಿದವರಾಗಿದ್ದಾರೆ. ಇವರಲ್ಲಿ 68 ವರ್ಷದ ವೃದ್ಧೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ನಗರದಲ್ಲಿ 6 ವರ್ಷದ ಬಾಲಕ, 32 ವರ್ಷದ ಮಹಿಳೆ 911ರ ರೋಗಿ ಸಂಪರ್ಕದಿಂದ ರೋಗ ತಗುಲಿದೆ. ಇನ್ನುಳಿದಂತೆ 11 ಮಂದಿಗೆ ರೋಗಿ ನಂ.653ರ ದ್ವಿತೀಯ ಸಂಪರ್ಕದಿಂದ ರೋಗ ಹರಡಿದೆ. ಎಲ್ಲರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close