ಕರ್ನಾಟಕ ಸುದ್ದಿ

ಕರ್ನಾಟಕದಲ್ಲಿ ನಿಲ್ಲದ ಕೊರೋನ ಅರ್ಭಟ; ಇಂದು ಒಂದೇ ದಿನ 69 ಕೇಸ್ ಪತ್ತೆ

Posted By : Sirajuddin Bangar

Source : NS18

ಬೆಂಗಳೂರು (ಮೇ 15): ದೇಶದಲ್ಲಿ 3ನೇ ಹಂತದ ಲಾಕ್​ಡೌನ್​ ಮುಗಿಯಲು ಎರಡೇ ದಿನ ಬಾಕಿ ಉಳಿದಿದೆ. ಆದರೆ, ಕರ್ನಾಟಕದಲ್ಲಿ ಕೊರೋನಾ ಅಬ್ಬರ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ರಾಜ್ಯದಲ್ಲಿ 69 ಕೊರೋನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಮಾರಕ ಸೋಂಕಿನ ಭೀತಿ ಹೆಚ್ಚಾಗಿದೆ. ಈ ಮೂಲಕ ಕರ್ನಾಟಕದಲ್ಲಿ 1,056 ಕೊರೋನಾ ಕೇಸ್​ಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಕೊರೋನಾ ಕೇಸ್​ಗಳು 1 ಸಾವಿರದ ಗಡಿ ದಾಟಿವೆ. 480 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 36 ರೋಗಿಗಳು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಓರ್ವ ಕೊರೋನಾ ರೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 11 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಪತ್ತೆಯಾಗಿರುವ ಹೊಸ ಕೊರೋನಾ ಕೇಸುಗಳ ಪೈಕಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ದುಬೈನಿಂದ 2 ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿದ 21 ಪ್ರಯಾಣಿಕರಿಗೆ ಕೊರೋನಾ ದೃಢಪಟ್ಟಿದೆ. ಇಂದು ಬೆಂಗಳೂರಿನಲ್ಲಿ 13, ದಕ್ಷಿಣ ಕನ್ನಡ, 16, ಮಂಡ್ಯ- 13, ಬೀದರ್​- 7, ಕಲಬುರ್ಗಿ- 3 ಹಾಸನ- 4, ಉಡುಪಿ- 5, ಚಿತ್ರದುರ್ಗ- 2, ಶಿವಮೊಗ್ಗ-1, ಬಾಗಲಕೋಟೆ- 1, ಕೋಲಾರ- 1, ಉತ್ತರ ಕನ್ನಡ- 1 ಕೊರೋನಾ ಕೇಸುಗಳು ಪತ್ತೆಯಾಗಿವೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close