ಕರ್ನಾಟಕ ಸುದ್ದಿ

ಇಂದು ಸುದ್ದಿಗೋಷ್ಠಿ ಕರೆದಿರುವ ಸಿಎಂ ಯಡಿಯೂರಪ್ಪ ; ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ?

Posted By : Sirajuddin Bangar

ಬೆಂಗಳೂರು (ಮೇ 15); ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಳಗ್ಗೆ 12.30ಕ್ಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಸುಮಾರು 500 ಕೋಟಿ ರೂ ಮೌಲ್ಯದ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ರಾಜ್ಯದ ವಿವಿಧ ಸ್ತರದ ಜನ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಡಿಯೂರಪ್ಪ ಕಳೆದ ವಾರ 1,610 ಕೋಟಿ ರೂ ಮೌಲ್ಯದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅದರ ಬೆನ್ನಿಗೆ ಇಂದು 500 ಕೋಟಿ ರೂ ಮೌಲ್ಯದ ಮತ್ತೊಂದು ಪ್ಯಾಕೇಜ್ ಘೋಷಿಸಲು ಮುಂದಾಗಿದ್ದಾರೆ ಎಂಬ ಮಾಹಿತಿಗಳು ಸರ್ಕಾರದ ಮೂಲದಿಂದ ಲಭ್ಯವಾಗುತ್ತಿವೆ.

ಈ ಪ್ಯಾಕೇಜ್‌ನಲ್ಲಿ ಬಳಕೆ ಬರದೆ ಹಾಳಾಗಿ ಹೋಗಿರುವ ಹಣ್ಣು ತರಕಾರಿ ಬೆಳೆಗಳಿಗೆ ಧನ ಸಹಾಯ ನೀಡಲು ನಿಶ್ಚಯಿಸಲಾಗಿದೆ. ಎಕರೆ ಲೆಕ್ಕದಲ್ಲಿ ಪ್ಯಾಕೇಜ್ ನೀಡಲಿರುವ ಸಿಎಂ ಕೆಳ ಸಮುದಾಯದ ವರ್ಗಕ್ಕೂ ಪ್ಯಾಕೇಜ್‌ನಲ್ಲಿ ಹಣ ಮೀಸಲಿಟ್ಟಿದ್ದಾರೆ.

ಇದಲ್ಲದೆ, ಅರ್ಚಕರಿಗೆ, ಕಮ್ಮಾರರಿಗೆ, ಸವಿತಾ ಸಮಾಜದ ವಾದ್ಯ ನುಡಿಸುವ ವರ್ಗಕ್ಕೆ ಹಾಗೂ ಕುಂಬಾರರಿಗೆ ತಲಾ 3,000 ಸಹಾಯ ಧನ ನೀಡಲು ಸಹ ಸರ್ಕಾರ ಮುಂದಾಗಿದ್ದಾರೆ. ಈಗಾಗಲೇ ಎಲ್ಲವನ್ನೂ ಸಿದ್ಧತೆ ಮಾಡಿಕೊಂಡಿರುವ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close