ರಾಯಚೂರು ಜಿಲ್ಲೆ ಸುದ್ದಿ

ರಾಯಚೂರು ಮಾವಿನ ಕೆರೆಯಲ್ಲಿ ತ್ಯಾಜ್ಯದಿಂದಾಗಿ ಮೀನುಗಳ ಸಾವು; ದುರ್ನಾತ ಬೀರುತ್ತಿರುವ ಐತಿಹಾಸಿಕ ನಗರ ರಾಯಚೂರು

Posted By : Sirajuddin Bangar

ಮಾವಿನಕೆರೆಗೆ ರಾಯಚೂರು ನಗರದ ಚರಂಡಿ ನೀರು ಬಂದು ಸೇರುತ್ತಿರುವುದು, ನಗರ ತ್ಯಾಜ್ಯವು ಸಹ ಸೇರುತ್ತಿದೆ. ಈಗ ಬೇಸಿಗೆಯ ಕಾಲ ಕೆರೆಯಲ್ಲಿಯ ನೀರಿನ ಪ್ರಮಾಣವೂ ಸಹ ಕಡಿಮೆಯಾಗಿದೆ. ಇದರಿಂದಾಗಿ ನೀರಿನಲ್ಲಿ ಆಮ್ಲಜನಕದ ಕೊರತೆಯಾಗಿ ಮೀನುಗಳು ಸಾಯುತ್ತಿವೆ.

ರಾಯಚೂರಿನ ಮಧ್ಯೆ ಭಾಗದಲ್ಲಿರುವ ಒಂದು ಕಡೆ ಕೋಟೆ ಹೊಂದಿರುವ ಗುಡ್ಡದೊಂದಿಗೆ ಸದಾ ನೀರು ಹೊಂದಿರುವ ಮಾವಿನಕೆರೆ ರಾಯಚೂರು ಸೌಂದರ್ಯ ಹೆಚ್ಚಿಸಿದೆ. ನೂರಾರು ಎಕರೆ ವಿಸ್ತಾರ ಹೊಂದಿರುವ ಮಾವಿನಕೆರೆಯು ಒಂದು ಕಾಲದಲ್ಲಿ ರಾಯಚೂರು ಜನರಿಗೆ ನೀರಿನ ಆಸರೆಯಾಗಿತ್ತು. ಈಗ ನೀರು ಬಳಕೆ ಕಡಿಮೆ ಆದರೂ ಮಾವಿನಕೆರೆಯು ಸುಂದರ ಪಿಕ್ ನಿಕ್ ತಾಣವಾಗಿದೆ. ಪ್ರತಿನಿತ್ಯ ವಾಯುವಿಹಾರಿಗಳು ಮುಂಜಾನೆ ಹಾಗೂ ಸಂಜೆ ಇಲ್ಲಿ ವಾಕಿಂಗ್ ಗೆ ಬರುತ್ತಾರೆ. ಒತ್ತಡದ ಬದುಕಿನ ಮಧ್ಯೆ ಕೆರೆಯ ದಂಡೆಗೆ ಬಂದು ವಿಶ್ರಾಂತಿ ಪಡೆಯುತ್ತಾರೆ.

ಆದರೆ ಕಳೆದ ಮೂರು ದಿನಗಳಿಂದ ಈ ಕೆರೆಯು ದುರ್ನಾತ ಬೀರುತ್ತಿದೆ. ಕಾರಣ ಲಕ್ಷಾಂತರ ಮೀನುಗಳು ಸಾವನ್ನಪ್ಪುತ್ತಿವೆ. ಮಾವಿನಕೆರೆಗೆ ರಾಯಚೂರು ನಗರದ ಚರಂಡಿ ನೀರು ಬಂದು ಸೇರುತ್ತಿರುವುದು, ನಗರ ತ್ಯಾಜ್ಯವು ಸಹ ಸೇರುತ್ತಿದೆ. ಈಗ ಬೇಸಿಗೆಯ ಕಾಲ ಕೆರೆಯಲ್ಲಿಯ ನೀರಿನ ಪ್ರಮಾಣವೂ ಸಹ ಕಡಿಮೆಯಾಗಿದೆ. ಇದರಿಂದಾಗಿ ನೀರಿನಲ್ಲಿ ಆಮ್ಲಜನಕದ ಕೊರತೆಯಾಗಿ ಮೀನುಗಳು ಸಾಯುತ್ತಿವೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close