ಕರ್ನಾಟಕ ಸುದ್ದಿ

ಕೋಲಾರ ಕೆಜಿಎಫ್​​ ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಯತ್ನ; ಮೂವರ ಸಾವು, ಇಬ್ಬರ ಬಂಧನ

ಚಿನ್ನದ‌ ಗಣಿ ಗುಂಡಿಯಲ್ಲಿದ್ದ ಕಬ್ಬಿಣ ಕಳ್ಳತನಕ್ಕೆ ಯತ್ನಿಸಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ

ಕೋಲಾರ(ಮೇ.14) : ಕೆಜಿಎಫ್​​ ಚಿನ್ನದ ಗಣಿಯಲ್ಲಿ ಕಳುವಿಗೆ ಯತ್ನ ನಡೆಸಿ ಕಾಲು ಜಾರಿ ಬಿದ್ದು ಮೂವರು ಸಾವನ್ನಪ್ಪಿ, ಇಬ್ಬರನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್​​​​ ಮಾರಿಕುಪ್ಪಂ ಬಳಿಯ ಚಿನ್ನದ ಗಣಿಯಲ್ಲಿ ನಡೆದಿದೆ.  

ಮೃತರೆಲ್ಲರು ಕೆಜಿಎಫ್ ನ ಸುಸಾಯಿಪಾಳ್ಯದ ನಿವಾಸಿಗಳಾದ ಜೋಸೆಫ್, ಕಂದನ್ ಹಾಗೂ ಪಡಿಯಪ್ಪ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಘಟನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನದ‌ ಗಣಿ ಗುಂಡಿಯಲ್ಲಿದ್ದ ಕಬ್ಬಿಣ ಕಳ್ಳತನಕ್ಕೆ ಯತ್ನಿಸಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಕೆಜಿಎಫ್ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಯಿಂದ ಮತ್ತೊರ್ವ ಪಡಿಯಪ್ಪನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಳ್ಳತನಕ್ಕೆ ಒಟ್ಟು ಐವರು ಬಂದಿದ್ದರು. ಸುಮಾರು ನೂರಾರು ಅಡಿ ಆಳವಿರುವ ಚಿನ್ನದ ಗಣಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close