ಮಾನವಿ

ಮಾನ್ವಿ: 6 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಬಸ್ ಡಿಪೋ ಕಟ್ಟಡ ಕಾಮಗಾರಿಗೆ ಚಾಲನೆ;ಶಾಸಕ ಶ್ರೀ ರಾಜಾ ವೆಂಕಟಪ್ಪ ನಾಯಕ

ಮಾನ್ವಿ ಮೇ.13 : ಇಂದು ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ನಡೆದ 2018-19 ನೇ ಸಾಲಿನ ಈಶಾನ್ಯ ಸಾರಿಗೆ ಇಲಾಖೆಯ ಯೋಜನೆ ಅಡಿಯಲ್ಲಿ ಸುಮಾರು 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಬಸ್ ಡಿಪೋ ಕಟ್ಟಡ ಕಾಮಗಾರಿಗೆ ಮಾನ್ವಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಇವರು ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ಮಾನ್ವಿ ಪಟ್ಟಣದ ನೂತನ ಬಸ್ ಡಿಪೋ ಕಾಮಗಾರಿ ಬಹುದಿನಗಳ ಬೇಡಿಕೆಯಾಗಿತ್ತು, ಬಸ್ ಡಿಪೋ ಇಂದು ಶಂಕುಸ್ಥಾಪನೆ ಆಗಿರುವದರಿಂದ ಬಹಳ ಸಂತೋಷವಾಗಿದೆ ಎಂದು ಶಾಸಕರು ಹೇಳಿದರು

ಇದೆ ಸಂದರ್ಭದಲ್ಲಿ ಪುರಸಭೆ ಸದ್ಯಸರಾದ ಶ್ರೀ ರಾಜಾ ಮಹೇಂದ್ರ ನಾಯಕ, ಭಾಷ ಸಾಬ್, ಶರಣಪ್ಪ ಮೇದ್, ಇಬ್ರಾಹಿಂ ಖುರೀಷ, ಹನುಮಂತ ಭೋವಿ, ರಾಜ್ಯ ಜೆಡಿಎಸ್ ಯುವ ಮುಂಖಡರಾದ ಶ್ರೀ ರಾಜಾ ರಾಮಚಂದ್ರ ನಾಯಕ, ತಾಲ್ಲೂಕು ಜೆಡಿಎಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ, ಜಂಭುನಾಥ ಯಾದವ, ನಗರ ಘಟಕ ಅದ್ಯಕ್ಷ ಖಲೀಲ ಖುರೀಷ, ನಾಗರಾಜ ಭೋಗಾವತಿ, ಶ್ರೀದರ ಸ್ವಾಮಿ, ಉದಯ ಕುಮಾರ್, ಬಸವರಾಜ ಶೆಟ್ಟಿ,ಗೋಪಾಲ ನಾಯಕ ಹರವಿ, ಪಿ.ರವಿಕುಮಾರ್,ಜೆ ಎಚ್ ದೇವರಾಜ, ಮೌಲ ಸಾಬ್, ಮಲಪ್ಪ ಹೂಗಾರ್, ಎಸ್ ಯಕೋಬ, ವಿರೇಶ ಉಪ್ಪಾರ್, ಹಬೀಬ್ ಸಾಬ್, ಅನ್ವರ್, ಲಕ್ಷ್ಮಣ ಯಾದವ, ಬಸನಗೌಡ ಬೆಟ್ಟದೂರು, ಸುಬನ್ ಭೇಗ್, ಅಬ್ರಾರ್, ಎಮ್ ಡಿ‌ ಉಸ್ಮಾನ್, ನುಸರತ್, ಶಹನವಾಜ್, ಡಿಪೋ ಮ್ಯಾನೇಜರಾದ ಮಹೇಂದ್ರ ಕುಮಾರ್, ಗುತ್ತೇದಾರರಾದ ಡಿ ನವೀನ ಕುಮಾರ್, ಉಪಸ್ಥಿತಿರಿದ್ದರು

Continue

Related Articles

Leave a Reply

Your email address will not be published. Required fields are marked *

Back to top button
Close
Close