ಅಂತರಾಷ್ಟ್ರೀಯ

ಕರ್ನಾಟಕ ಜ್ವಾಲೆ ಬ್ರೆಕೀಂಗ್ ನ್ಯೂಸ್ : 3 ಲಕ್ಷ ಕೋಟಿ ಸಾಲ, ಹೂಡಿಕೆ ಮಿತಿ ಹೆಚ್ಚಳ: ಸಣ್ಣ ಕೈಗಾರಿಕೆಗಳಿಗೆ ಪುಷ್ಟಿ

ದೇಶ ಸ್ವಾವಲಂಬನೆ ಗಳಿಸಲು ಸಣ್ಣ ಕೈಗಾರಿಕೆಗಳು ಬಹಳ ಮುಖ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪುಷ್ಟಿವ ಹಲವು ಕ್ರಮಗಳನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಘೋಷಿಸಿದರು. ನಿನ್ನೆ ಪ್ರಧಾನಿಗಳು ಪ್ರಕಟಿಸಿದ 20 ಲಕ್ಷ ಕೋಟಿ ಪ್ಯಾಕೇಜ್​ನ ವಿನಿಯೋಗದ ಬಗ್ಗೆ ಇಂದು ಹಣಕಾಸು ಸಚಿವರು ವಿವರ ನೀಡಿದರು. ಮೊದಲ ಹಂತವಾಗಿ ಸಣ್ಣ ಮತ್ತು ಮಧ್ಯಮ (MSMEs)ಕೈಗಾರಿಕೆಗಳಿಗೆ ಹಲವು ಸುಧಾರಣಾ ಮತ್ತು ಉತ್ತೇಜಕ ಕ್ರಮಗಳನ್ನು ಘೋಷಿಸಿದರು. ಅದರಲ್ಲಿ ಎಂಎಸ್​ಎಂಇಗಳ ಹೂಡಿಕೆ ಮಿತಿ ಹೆಚ್ಚಳ, ಕೋಟ್ಯಂತರ ರೂ ಸಾಲ ಸೌಲಭ್ಯಗಳೂ ಒಳಗೊಂಡಿವೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಯಾವುದೇ ಅಡಮಾನ ಇಲ್ಲದೆ 3 ಲಕ್ಷ ಕೋಟಿ ಸಾಲಗಳನ್ನು ನೀಡಲಾಗುವುದು ಎಂದು ಸಚಿವರು ಹೇಳಿದರು. ಈ ಕ್ರಮದಿಂದ ದೇಶದ 45 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಲಾಭವಾಗಲಿದೆ.

ಈಗ ಸಂಕಷ್ಟದಲ್ಲಿರುವ ಎಂಎಸ್​ಎಂಇಗಳಿಗೆ 20 ಸಾವಿರ ಕೋಟಿ ರೂ ಸಾಲದ ವ್ಯವಸ್ಥೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಇದರಿಂದ 2 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close