ಕರ್ನಾಟಕ ಸುದ್ದಿ

ಕರ್ನಾಟಕ ಜ್ವಾಲೆ ಬ್ರೆಕೀಂಗ್ ನ್ಯೂಸ್ : ವಿದ್ಯುತ್ ದರ ಹೆಚ್ಚಳಕ್ಕೆ ಬೆಂಗಳೂರಿಗರ ಆಕ್ರೋಶ; ಬಿಲ್ ಪಾವತಿಗೆ 3 ತಿಂಗಳ ಗಡುವು ಕೊಟ್ಟ ಬೆಸ್ಕಾಂ

ಒಂದುವೇಳೆ ಗ್ರಾಹಕರಿಗೆ ವಿದ್ಯುತ್ ಬಿಲ್ ಬಗ್ಗೆ ಗೊಂದಲವಿದ್ದರೆ 1912 ಸಹಾಯವಾಣಿಗೆ ಕರೆ ಮಾಡಿ ತಮ್ಮ ಗೊಂದಲ ಪರಿಹರಿಸಿಕೊಂಡು, ಬಿಲ್ ಪಾವತಿಸಬಹುದು. 3 ತಿಂಗಳಲ್ಲಿ 3 ಕಂತುಗಳಲ್ಲಿ ವಿದ್ಯುತ್​ ಬಿಲ್ ಕಟ್ಟಲು ಅವಕಾಶ ಕೂಡ ನೀಡಲಾಗಿದೆ.  

ಲಾಕ್​ಡೌನ್​ನಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಜನರು ಮನೆಯೊಳಗೇ ಬಂಧಿಯಾಗಬೇಕಾದ ಪರಿಸ್ಥಿತಿ ಬಂದಿದೆ. ಇದನ್ನೇ ನೆಪ ಮಾಡಿಕೊಂಡ ಬೆಸ್ಕಾಂ ಮನಸಿಗೆ ಬಂದಂತೆ ವಿದ್ಯುತ್ ಬಿಲ್ ನೀಡಿದೆ ಎಂದು ಬೆಂಗಳೂರಿನ ಜನರು ಭಾರೀ ಆಕ್ರೋಶ ಹೊರಹಾಕಿದ್ದರು. ಬೇರೆ ತಿಂಗಳಿಗಿಂತ ಈ ಬಾರಿ ವಿದ್ಯುತ್ ಬಿಲ್ 2 ಪಟ್ಟು ಜಾಸ್ತಿಯಾಗಿದೆ ಎಂಬ ಟೀಕೆಗಳು ಕೇಳಿಬಂದಿತ್ತು. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿರುವ ಬೆಸ್ಕಾಂ ಎಂಡಿ ರಾಜೇಶ್ ಗೌಡ ವಿದ್ಯುತ್ ಬಿಲ್ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.  3 ತಿಂಗಳಲ್ಲಿ 3 ಕಂತುಗಳಲ್ಲಿ ವಿದ್ಯುತ್​ ಬಿಲ್ ಕಟ್ಟಲು ಅವಕಾಶ ಕೂಡ ನೀಡಲಾಗಿದೆ.  

ಲಾಕ್​ಡೌನ್​ ವೇಳೆ ಮನಸಿಗೆ ಬಂದಂತೆ ಬೆಸ್ಕಾಂ ಬಿಲ್ ವಿತರಿಸಲಾಗಿದೆ ಎಂಬ ಕಾರಣಕ್ಕೆ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುತ್​ ಬಿಲ್​ನ ಪ್ರತಿಗಳು ಹರಿದಾಡಿ, ಬೆಸ್ಕಾಂ ಅನ್ನು ಟ್ರೋಲ್ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂ ಬೆಸ್ಕಾಂ ಎಂಡಿ ರಾಜೇಶ್ ಗೌಡ ಸುದ್ದಿಗೋಷ್ಠಿ ನಡೆಸಿದ್ದಾರೆ. ಲಾಕ್​ಡೌನ್​ನಿಂದಾಗಿ ಜನರು ಮನೆಯಲ್ಲೇ ಇದ್ದಾರೆ. ಐಟಿ ಬಿಟಿ ಉದ್ಯೋಗಿಗಳು ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇಸಿಗೆಯಾದ್ದರಿಂದ ಫ್ಯಾನ್, ಎಸಿ ಇನ್ನಿತರ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗಿದೆ. ವಿದ್ಯುತ್ ಬಳಕೆ ಹೆಚ್ಚಾದಂತೆ ಸ್ಲ್ಯಾಬ್ ದರ ಏರಿಕೆಯಾಗುತ್ತದೆ. ಈ ಹಿನ್ನಲೆಯಲ್ಲಿ ವಿದ್ಯುತ್ ದರ ಏರಿಕೆಯಾಗಿದೆ ಎಂದಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close