ಅಂತರಾಷ್ಟ್ರೀಯ

ಕರ್ನಾಟಕ ಜ್ವಾಲೆ ಬ್ರೆಕೀಂಗ್ ನ್ಯೂಸ್ : ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ.ಹಂಚಿಕೆ​; ನಿರ್ಮಲಾ ಸೀತಾರಾಮನ್​

ಕೊರೋನಾ ವೈರಸ್​ನಿಂದಾಗಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇಂದು ಈ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್​ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಮತ್ತು ಹೇಗೆ ಹಂಚಿಕೆ ಮಾಡಲಾಗಿದೆ ಎಂಬ ವಿವರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.

ಸಂಜೆ ಸರಿಯಾಗಿ ನಾಲ್ಕು ಗಂಟೆಗೆ ಸುದ್ದಿಗೋಷ್ಠಿ ಆರಂಭಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಹಣಕಾಸು ಪ್ಯಾಕೇಜ್ ಮೂಲಭೂತವಾಗಿ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಅತ್ಯಂತ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಸಮಗ್ರ ದೃಷ್ಟಿಕೋನದೊಂದಿಗೆ ಮತ್ತು ಸಮಾಜದ ಹಲವಾರು ವರ್ಗಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಇದನ್ನು ರೂಪಿಸಲಾಯಿತು ಎಂದು ಸೀತಾರಾಮನ್ ಹೇಳಿದರು.

ಆರ್ಥಿಕತೆ, ನಿರ್ಮಾಣ, ವ್ಯವಸ್ಥೆ, ಜನಸಂಖ್ಯೆ ಹಾಗೂ ಬೇಡಿಕೆ ಇವು ಆತ್ಮ ನಿರ್ಭಾರ್ ಭಾರತದ ಐದು ಆಧಾರ ಸ್ತಂಭಗಳು ಎಂದು ವಿತ್ತ ಸಚಿವರು ಹೇಳಿದರು. ಹಾಗೆಯೇ ಆತ್ಮ ನಿರ್ಭಾರ್ (ಸ್ವಾವಲಂಬಿ) ಭಾರತ ಅಂದರೆ ಭಾರತವು ಪ್ರತ್ಯೇಕವಾಗಿ ಇರುವ ದೇಶ ಎಂದು ಅರ್ಥವಲ್ಲ ಎಂದು ಹೇಳಿದರು.

ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಜಾಮೀನು ರಹಿತ ಸಾಲ ನೀಡಲು ಮೀಸಲಿರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close