ಕರ್ನಾಟಕ ಸುದ್ದಿ

ಕರ್ನಾಟಕ ಜ್ವಾಲೆ ಬ್ರೆಕೀಂಗ್ ನ್ಯೂಸ್ : 60 ವರ್ಷ ಮೇಲ್ಪಟ್ಟ ಹಾಗೂ ಬಿಪಿಎಲ್ ಕಾರ್ಡ್ ಉಳ್ಳವರಿಗೆ ಉಚಿತ ಔಷಧ; ಡಿಸಿಎಂ ಅಶ್ವತ್ಥ್‌ ನಾರಾಯಣ್ ಆಶ್ವಾಸನೆ

ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಕರ್ಯಗಳ ಕೊರತೆ ಇದೆ. ಅಲ್ಲಿಗೆ ಬೇಕಾದ ಅಕ್ಸಿಜನ್, ಔಷಧಿಗಳು, ಸಿಬ್ಬಂದಿ, ಪಿಪಿಇ ಕಿಟ್ ಒದಗಿಸುವುದು ಸೇರಿದಂತೆ ಎಲ್ಲಾ ಅವಶ್ಯಕತೆಗಳನ್ನ ಬಿಬಿಎಂಪಿ ಹೆಲ್ತ್ ಕೇರ್ ಹೆಸರಲ್ಲಿ ಸದೃಢಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಡಿಸಿಎಂ ಅಶ್ವತ್ಥ್‌ ನಾರಾಯಣ್ ತಿಳಿಸಿದ್ದಾರೆ.

ಬೆಂಗಳೂರು (ಮೇ 13); 60 ವರ್ಷ ಮೇಲ್ಪಟ್ಟ ಹಾಗೂ ಬಿಪಿಎಲ್ ಕಾರ್ಡ್ ಉಳ್ಳವರಿಗೆ ಉಚಿತ ಔಷಧ ನೀಡಲಾಗುವುದು. ಅಲ್ಲದೆ, ನಗರದ ಎಲ್ಲಾ ವಾರ್ಡ್‌‌ಗಳಲ್ಲೂ ಜನೌಷಧ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್ ತಿಳಿಸಿದ್ದಾರೆ.

ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ಸಭೆ ಬಳಿಕ ಬೆಂಗಳೂರು ನಗರದಲ್ಲಿ ಕೊರೋನಾ ನಿಯಂತ್ರಣದ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, “ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಕರ್ಯಗಳ ಕೊರತೆ ಇದೆ. ಅಲ್ಲಿಗೆ ಬೇಕಾದ ಅಕ್ಸಿಜನ್, ಔಷಧಿಗಳು, ಸಿಬ್ಬಂದಿ, ಪಿಪಿಇ ಕಿಟ್ ಒದಗಿಸುವುದು ಸೇರಿದಂತೆ ಎಲ್ಲಾ ಅವಶ್ಯಕತೆಗಳನ್ನ ಬಿಬಿಎಂಪಿ ಹೆಲ್ತ್ ಕೇರ್ ಹೆಸರಲ್ಲಿ ಸದೃಢಗೊಳಿಸಲು ಚಿಂತನೆ ನಡೆಸಲಾಗಿದೆ.

ಆಶಾ ಕಾರ್ಯಕರ್ತೆರು ಎಲ್ಲ ಕಡೆ ಡಾಟಾ ಕಲೆಕ್ಟ್ ಮಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಔಷಧ ಪೂರೈಕೆ ಸರಿಯಾಗಿ ಅಗುತ್ತಿಲ್ಲ ಎಂಬ ಆರೋಪ ಇದೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು. 60 ವರ್ಷ ಮೇಲ್ಪಟ್ಟ ಹಾಗೂ ಬಿಪಿಎಲ್ ಕಾರ್ಡ್ ಉಳ್ಳವರಿಗೆ ಉಚಿತ ಔಷಧ ನೀಡಲಾಗುವುದು. ಅಲ್ಲದೆ, ನಗರದ ಎಲ್ಲಾ ವಾರ್ಡ್‌‌ಗಳಲ್ಲೂ ಜನೌಷಧ ಕೇಂದ್ರ ತೆರೆಯಲಾಗುವುದು” ಎಂದು ಆಶ್ವಾಸನೆ ನೀಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close