ಕರ್ನಾಟಕ ಸುದ್ದಿ

ಕರ್ನಾಟಕ ಜ್ವಾಲೆ ಬ್ರೆಕಿಂಗ್ ನ್ಯೂಸ್ : ಬೆಂಗಳೂರು, ದೆಹಲಿ, ಮುಂಬೈನಲ್ಲಿ ಸಿಲುಕಿದವರಿಗೆ ಸಿಹಿಸುದ್ದಿ; ಮೇ 19ರಿಂದ ಏರ್​ ಇಂಡಿಯಾ ವಿಮಾನ ಸಂಚಾರ

ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಿಂದ ಏರ್​ ಇಂಡಿಯಾ ವಿಮಾನಗಳು ಹಾರಾಟ ನಡೆಸಲಿವೆ. ಬೆಂಗಳೂರಿನಿಂದ ಮುಂಬೈ, ದೆಹಲಿ, ಹೈದರಾಬಾದ್​ಗೆ ವಿಮಾನಗಳ ವ್ಯವಸ್ಥೆ ಇರಲಿದೆ.

ದೇಶದಲ್ಲಿ 3ನೇ ಹಂತದ ಲಾಕ್​ಡೌನ್​ ಮುಗಿಯಲು 4 ದಿನಗಳಷ್ಟೇ ಬಾಕಿ ಇವೆ. ಈಗಾಗಲೇ ಕೇಂದ್ರ ಸರ್ಕಾರ 4ನೇ ಹಂತದ ಲಾಕ್​ಡೌನ್​ನ ಸುಳಿವು ನೀಡಿದೆ. ಆದರೆ, ಮೇ 18ರ ಬಳಿಕ ಲಾಕ್​ಡೌನ್​ ನಿಯಮಗಳಲ್ಲಿ ಭಾರೀ ಸಡಿಲಿಕೆಯಾಗಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ರೈಲು, ವಿಮಾನ ಸಂಚಾರಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಮೇ 19ರಿಂದ ಜೂನ್ 2ರವರೆಗೆ ಭಾರತದಲ್ಲಿ ಏರ್​ ಇಂಡಿಯಾ ವಿಮಾನಗಳ ಸಂಚಾರ ಆರಂಭವಾಗಲಿದೆ.

ದೇಶದ ನಾನಾ ರಾಜ್ಯಗಳಲ್ಲಿ ಸಿಲುಕಿರುವ ಜನರನ್ನು ಅವರ ಊರಿಗೆ ತಲುಪಿಸುವ ಸಲುವಾಗಿ ಏರ್​ ಇಂಡಿಯಾ ಮೇ 19ರಿಂದ ವಿಶೇಷ ವಿಮಾನಗಳ ವ್ಯವಸ್ಥೆ ಕಲ್ಪಿಸಿದೆ. ಈ ವಿಮಾನಗಳಲ್ಲಿ ಸಂಚರಿಸುವವರು ಟಿಕೆಟ್ ದರವನ್ನು ತಾವೇ ಪಾವತಿಸಬೇಕು. ಶೀಘ್ರದಲ್ಲೇ ಆನ್​ಲೈನ್​ ಬುಕಿಂಗ್​ ಕೂಡ ಶುರುವಾಗಲಿದ್ದು, ಇದರ ಮೂಲಕ ಲಾಕ್​ಡೌನ್​ನಿಂದಾಗಿ ಪರ ಊರುಗಳಲ್ಲಿ ಸಿಲುಕಿರುವವರು ಊರಿಗೆ ಮರಳಬಹುದಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close