ಕರ್ನಾಟಕ ಸುದ್ದಿ

ಕರ್ನಾಟಕ ಜ್ವಾಲೆ ಬ್ರೆಕಿಂಗ್ ನ್ಯೂಸ್ : ಹಾಸನದಲ್ಲಿ ಇಂದು ಮತ್ತೆ 4 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ; ನೆನ್ನೆ ಮುಂಬೈನಿಂದ ಬಂದಿದ್ದ ಒಂದೇ ಕುಟುಂಬದವರಲ್ಲಿ ಸೋಂಕು

ವರದಿ : ರಮೇಶ ಕುಮಾರ, ಹಾಸನ

1200 ಮಂದಿ ಈಗಾಗಲೇ ಸೇವಾಸಿಂಧು ಆಪ್ ನಲ್ಲಿ ಪಾಸ್​ಗಾಗಿ ನೋಂದಣಿ ಮಾಡಿಕೊಂಡಿದ್ದರು. 1300 ಮಂದಿಗೂ ಹಾಸನಕ್ಕೆ ಬರಬೇಡಿ ಎಂದು ಜಿಲ್ಲಾಡಳಿತದಿಂದ ಸಂದೇಶ ಕಳುಹಿಸಲಾಗಿದೆ. ಒಟ್ಟು 133 ಮಂದಿ ಈಗ ಚನ್ನರಾಯಪಟ್ಟಣದಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ ಎಂದು ಹೇಳಿದರು.

ಹಾಸನ: ಹಸಿರು ವಲಯದಲ್ಲಿ ಇದ್ದ ಹಾಸನ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ಕು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ನೆನ್ನೆಯಿಂದ ಒಟ್ಟು ಒಂಭತ್ತು ಪ್ರಕರಣಗಳು ದಾಖಲಾಗಿವೆ. 

ಈ ಸಂಬಂಧ ಮಾತನಾಡಿರುವ ಹಾಸನ ಜಿಲ್ಲಾಧಿಕಾರಿ ಅರ್.ಗಿರೀಶ್ ಅವರು, ಹಾಸನದಲ್ಲಿ ಮತ್ತೆ ನಾಲ್ಕು ಪಾಸಿಟಿವ್ ಪ್ರಕರಣ ವರದಿಯಾಗಿದೆ. ನಾಲ್ವರೂ ಒಂದೇ ಕುಟುಂಬದವರಾಗಿದ್ದು, ಗಂಡ, ಹೆಂಡತಿ ಇಬ್ಬರು ಮಕ್ಕಳಾಗಿದ್ದಾರೆ. ಗಂಡ ಮುಂಬೈನಲ್ಲಿ ಬ್ಯಾಂಕ್ ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದರು. ನಿನ್ನೆ ಮೇ 12 ರಂದು ಮುಂಬೈನಿಂದ ಹಾಸನಕ್ಕೆ ಸ್ವಂತ ಕಾರಿನಲ್ಲಿ ಬಂದಿದ್ದಾರೆ. ಬಂದವರು ಹೊರಗೆ ಎಲ್ಲೂ ಸುತ್ತಾಡಿಲ್ಲ. ನೇರವಾಗಿ ಜಿಲ್ಲಾಡಳಿತ ಮಾಡಿರುವ ಕ್ವಾರಂಟೈನ್ ಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈಗ ಪಾಸಿಟಿವ್ ಬಂದಿರುವುದರಿಂದ ಇವರ ಜೊತೆಯಲ್ಲಿ ಮೊರಾರ್ಜಿ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ  57 ಮಂದಿಯನ್ನು ಹಾಸನದ ಹಿಮ್ಸ್​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close